

ತಿರುಪತಿ: ವಿಶ್ವವಿಖ್ಯಾತ ಧಾರ್ಮಿಕ ಯಾತ್ರಾಸ್ಥಳ ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಆದರೆ ಭಕ್ತರು ಕೆಲವು ಸಂದರ್ಭಗಳಲ್ಲಿ ದೇವರ ದರ್ಶನಕ್ಕೆ ತೊಂದರೆ ಅನುಭವಿಸುವುದುಂಟು. ಅಂತಹವರಿಗೆ ಅನುಕೂಲವಾಗುವಂತೆ ತಿರುಮಲ ತಿರುಪತಿ ದೇವಸ್ಥಾನಂ (TTD) ಹಲವು ಕ್ರಮಗಳನ್ನು ಕೈಗೊಂಡಿದೆ.
ವೆಂಕಟೇಶ್ವರ ಸ್ವಾಮಿಯ ಸುಪ್ರಭಾತ ಸೇವೆಯಿಂದ ಏಕಾಂತ ಸೇವೆಯವರೆಗೆ ವಿವಿಧ ಸೇವಾ ಟಿಕೆಟ್‌ಗಳನ್ನು ಮಾರಾಟ ಮಾಡುತ್ತದೆ. ಇದೇ ಕ್ರಮದಲ್ಲಿ, ಟಿಟಿಡಿ ಆರ್ಜಿತ ಸೇವೆಗಳ ಕೋಟಾ ಮತ್ತು ಜನವರಿ 2025 ರ ದರ್ಶನ ಟಿಕೆಟ್‌ಗಳನ್ನು ಅಕ್ಟೋಬರ್‌ನಲ್ಲಿ ಲಭ್ಯವಾಗುವಂತೆ ಮಾಡುತ್ತದೆ. ಅದರ ಭಾಗವಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಕ್ಟೋಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳಿಗಾಗಿ ಜನವರಿ 2025 ರ ಕೋಟಾವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತಿದೆ.
ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಆನ್‌ಲೈನ್ ನೋಂದಣಿಯನ್ನು ಅ.21 ರಂದು ಬೆಳಗ್ಗೆ 10 ಗಂಟೆಯವರೆಗೆ ಮಾಡಬಹುದು ಎಂದು ಟಿಟಿಡಿ ಪ್ರಕಟಿಸಿದೆ. ಆದರೆ ಈ ಟಿಕೆಟ್ ಪಡೆದ ಭಕ್ತರು ಅಕ್ಟೋಬರ್ 21ರಿಂದ 23ರ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಬೇಕು. ಅವರಿಗೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದೆ.
ಅಕ್ಟೋಬರ್ 22 ರಂದು ಬೆಳಿಗ್ಗೆ 10 ಗಂಟೆಗೆ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಾಲಂಕಾರ ಸೇವೆಯ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅದು ತಿಳಿಸಿದೆ.