ಅಬ್ಬಬ್ಬಾ.. ಒಂದೇ ದಿನದಲ್ಲಿ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಬಿತ್ತು 10 ಕೋಟಿ ರೂ. ಕಾಣಿಕೆ!

1285823
Published on

ತಿರುಪತಿ: ಜೀವನದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡುವುದೇ ಒಂದು ಪುಣ್ಯ. ದಿನನಿತ್ಯ ಸಾವಿರಾರು ಭಕ್ತರು ಶ್ರೀ ವೆಂಕಟೇಶ್ವರನ ದರ್ಶನ ಮಾಡುತ್ತಿರುತ್ತಾರೆ. ಇದರ ಸಂಖ್ಯೆ ಕೆಲವೊಮ್ಮೆ ಲಕ್ಷದವರೆಗೂ  ಏರಿಕೆಯಾಗುತ್ತದೆ.

ಭಕ್ತರ ಸಂಖ್ಯೆ ಮಾತ್ರವಲ್ಲದೇ ಕಾಣಿಕೆ ಸಂಗ್ರಹದಲ್ಲೂ ಮುಂಚೂಣಿಯಲ್ಲಿರುವ ಶ್ರೀ ಕ್ಷೇತ್ರ ಆಗ್ಗಾಗ್ಗೆ ವಿಶೇಷತೆಗಳಿಂದ ಭಕ್ತರನ್ನು ಸೆಳೆಯುತ್ತಿರುತ್ತದೆ. ಈ ಬಾರಿಯೂ ಸಹ ಒಂದೇ ದಿನದಲ್ಲಿ 10 ಕೋಟಿ ರೂ. ಕಾಣಿಕೆ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆದಿದೆ.

ಹಲವು ಟ್ರಸ್ಟ್​​ಗಳಿಂದ ತಿಮ್ಮಪ್ಪನಿಗೆ ಕಾಣಿಕೆಯಾಗಿ ಒಂದೇ ದಿನದಲ್ಲಿ 10 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಮಾಹಿತಿ ನೀಡಿದೆ.

ತಮಿಳುನಾಡಿನ ತಿರುನಲ್ವೇಲಿಯ ಉದ್ಯಮಿ ಹಾಗೂ ತಿಮ್ಮಪ್ಪನ ಭಕ್ತ ಗೋಪಾಲ ಬಾಲಕೃಷ್ಣನ್ ಎಂಬುವವರಿಂದಲೇ 7 ಕೋಟಿ ರೂ. ಕಾಣಿಕೆ ನೀಡಿದ್ದು, ಇನ್ನುಳಿದ ಶ್ರೀ ವೆಂಕಟೇಶ್ವರ ವಿದ್ಯಾದಾನ ಟ್ರಸ್ಟ್​ ಸೇರಿದಂತೆ ಇತರೆ ಎರಡು ಟ್ರಸ್ಟ್​ಗಳು ತಲಾ 1 ಕೋಟಿ ರೂ. ಕಾಣಿಕೆ ನೀಡಿವೆ. ಹಾಗಾಗಿ ದಿನದಲ್ಲೇ 10 ಕೋಟಿ ರೂ. ಸಂಗ್ರಹವಾಗಿದೆ. ಈ ಅಷ್ಟೂ ಹಣವನ್ನು ಡಿಡಿ ಮೂಲಕ ಭಕ್ತರು ನೀಡಿದ್ದಾರೆ ಎಂದು ಟಿಟಿಡಿ ಹೇಳಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net