

ನವದೆಹಲಿ: ತಿರುಪತಿ ಲಡ್ಡನ್ನು ಪವಿತ್ರ ಪ್ರಸಾದವಾಗಿದೆ. ತಿರುಮಲ ಶ್ರೀಗಳ ದರ್ಶನ ಪಡೆದ ಪ್ರತಿಯೊಬ್ಬ ಭಕ್ತರಿಗೂ ಸಾಕಷ್ಟು ಲಡ್ಡುಗಳನ್ನು ನೀಡಲಾಗುವುದು. ಆಧಾರ್ ಸಲ್ಲಿಕೆಗೆ ಎರಡು ಲಡ್ಡುಗಳನ್ನು ನೀಡುವ ಹೊಸ ನೀತಿಯನ್ನು ದೃಢಪಡಿಸಿದ್ದಾರೆ. ದರ್ಶನದ ಟೋಕನ್ ಇಲ್ಲದ ಭಕ್ತರು ತಿರುಪತಿಯ ಲಡ್ಡು ಪ್ರಸಾದ ಪಡೆಯುವಾಗ ಆಧಾರ್ ತೋರಿಸುವುದನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಡ್ಡಾಯಗೊಳಿಸಿದೆ. ಲಡ್ಡೂ ಪ್ರಸಾದವನ್ನು ನೀಡುವುದು ಟಿಟಿಡಿಯ ಉದ್ದೇಶವಾಗಿದೆ ಎಂದು ಟಿಟಿಡಿ ಇಒ ಶ್ಯಾಮಲಾ ರಾವ್ ತಿಳಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ಲಡ್ಡು ಬೇಕಾದರೆ ಇನ್ನು ಆಧಾರ್ ಕಾರ್ಡ್ ತೋರಿಸಬೇಕು. ದರ್ಶನದ ಟೋಕನ್ ಇಲ್ಲದ ಭಕ್ತರು ತಿರುಪತಿಯ ಲಡ್ಡು ಪ್ರಸಾದ ಪಡೆಯುವಾಗ ಆಧಾರ್ ತೋರಿಸುವುದನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಡ್ಡಾಯಗೊಳಿಸಿದೆ.
ಸ್ವಾಮಿಯ ದರ್ಶನ ಪಡೆಯದೇ ನೇರವಾಗಿ ಲಡ್ಡು ಕೌಂಟರ್ ಗಳಿಗೆ ಲಡ್ಡುಗಳಿಗಾಗಿ ತೆರಳುವ ಭಕ್ತರಿಗೆ ಆಧಾರ್ ಕಾರ್ಡ್ ಮೂಲಕ ದಿನಕ್ಕೆ ಎರಡು ಲಡ್ಡುಗಳನ್ನು ನೀಡಲಾಗುವುದು. ಪ್ರತಿದಿನ 3.5 ಲಕ್ಷ ಲಡ್ಡುಗಳನ್ನು ಭಕ್ತರಿಗೆ ಮಾರಾಟ ಮಾಡುತ್ತಿದ್ದು, ಅದರಲ್ಲಿ ಕೇವಲ 2.5 ಲಕ್ಷ ಲಡ್ಡುಗಳು ಭಕ್ತರಿಗೆ ತಲುಪುತ್ತವೆ ಮತ್ತು ಉಳಿದ 1 ಲಕ್ಷ ಲಡ್ಡುಗಳನ್ನು ದರ್ಶನ ಟೋಕನ್ ಇಲ್ಲದವರು ಖರೀದಿಸುತ್ತಾರೆ. ಕೆಲ ದಲ್ಲಾಳಿಗಳು ಹೆಚ್ಚಿನ ಪ್ರಮಾಣದಲ್ಲಿ ಲಡ್ಡೂಗಳನ್ನು ಖರೀದಿಸಿ ಹೊರ ವಲಯದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅದೇ ರೀತಿ ನಗರ ಪ್ರದೇಶದ ಹೊರಗೆ ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಶ್ರೀವಾರಿ ಲಡ್ಡು ಪ್ರಸಾದ ವಿತರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದಿದ್ದಾರೆ.
ಟಿಟಿಡಿ ಸಂಯೋಜಿತ ದೇವಸ್ಥಾನಗಳು ಮತ್ತು ಮಾಹಿತಿ ಕೇಂದ್ರಗಳಲ್ಲಿಯೂ ಶ್ರೀವಾರಿ ಲಡ್ಡು ಪ್ರಸಾದವನ್ನು ಟಿಟಿಡಿ ಮಾರಾಟ ಮಾಡುತ್ತಿದೆ. ತಿರುಮಲ ಹೊರತು ಪಡಿಸಿ ಇತರ ಪ್ರದೇಶಗಳಲ್ಲಿ ಶ್ರೀವಾರಿ ಭಕ್ತರಿಗೆ ಲಡ್ಡು ಪ್ರಸಾದ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಭಕ್ತರಿಗೆ ದಲ್ಲಾಳಿಗಳ ಹಾವಳಿ ತಪ್ಪಲಿದೆ ಎಂದಿದ್ದಾರೆ
ತಿರುಮಲ ಲಡ್ಡು ಕೌಂಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಲಿಕೆ ಸಿಬ್ಬಂದಿ ಭಾರೀ ಪ್ರಮಾಣದಲ್ಲಿ ಲಡ್ಡುಗಳನ್ನು ಮಾರಾಟ ಮಾಡಿರುವುದು ಟಿಟಿಡಿ ತನಿಖೆಯಲ್ಲಿ ಪತ್ತೆಯಾಗಿದೆ. ಟಿಟಿಡಿಯ ಐಟಿ ವ್ಯವಸ್ಥೆಯ ನೆರವಿನಿಂದ ಕಳೆದ 3 ದಿನಗಳಿಂದ ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯ ಮೂಲಕ ಭಕ್ತರ ಆಧಾರ್ ಕಾರ್ಡ್ ನೊಂದಣಿಯೊಂದಿಗೆ ಯಾರಿಗೆ ಲಡ್ಡುಗಳನ್ನು ಮಾರಾಟ ಮಾಡಲಾಗುತ್ತಿದೆ, ದರ್ಶನ ಪಡೆದು ಎಷ್ಟು ಲಡ್ಡೂಗಳನ್ನು ತೆಗೆದುಕೊಳ್ಳುತ್ತಿದ್ದಾರೆ. . ಹಾಗಾಗಿ ಭಕ್ತರು ಇದನ್ನು ಗಮನಿಸಿ ಶ್ರೀವಾರಿ ಲಡ್ಡು ಪ್ರಸಾದ ಮಾರಾಟದ ವದಂತಿಗಳನ್ನು ನಂಬಬೇಡಿ ಎಂದಿದ್ದಾರೆ.