

ಪಿರಿಯಾಪಟ್ಟಣ: ಒಕ್ಕಲಿಗರ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷರಾಗಿ ತೆಲಗಿನಕುಪ್ಪೆ ಗ್ರಾಮದ ಟಿ.ಎಸ್.ಉದಯ್ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ತಾಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ ನಿರ್ದೇಶಕರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ನನಗೆ ನೀಡಿರುವ ಅಧಿಕಾರವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಅಧ್ಯಕ್ಷ ಟಿ.ಎಸ್.ಉದಯ್ ಹೇಳಿದರು.
ಸಂಘದ ನಿರ್ದೇಶಕರಾದ ಎಂ.ಪಿ.ಅಣ್ಣೇಗೌಡ, ಚೌತಿ ಗೋವಿಂದೇಗೌಡ, ಎಂ.ಎಸ್.ಸುರೇಶ್, ಬಿ.ಜೆ.ದೇವರಾಜು, ಪಿ.ಸಿ.ಕೃಷ್ಣ, ಎಚ್.ಎಸ್.ರವಿ, ಎಚ್.ಎಸ್.ಕೃಷ್ಣೆಗೌಡ, ಜಯಣ್ಣ, ಆರ್.ವೆಂಕಟೇಶ್, ಪಿ.ಟಿ.ಮಂಜುನಾಥ್, ಕೆ.ಜೆ.ದೇವೇಗೌಡ, ಎನ್.ಚಂದ್ರಶೇಖರ್, ಎನ್.ಬಿ.ಹರೀಶ್, ಕೆ.ಎಸ್.ರಾಜೇಶ್, ಸ್ವಾಮಿ, ದೊಡ್ಡೇಗೌಡ ಮತ್ತಿತರಿದ್ದರು.