

ನವದೆಹಲಿ: ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿರುವ ಸುಂಕದ ಬಿಸಿ ಜವಳಿ ಉದ್ಯಮಕ್ಕೆ ತಟ್ಟಿದೆ. ಆಗಸ್ಟ್ 7ರಿಂದ ಮೊದಲ ಕಂತಿನ ಶೇ. 25 ಸುಂಕ ಜಾರಿಗೆ ಬಂದಿರುವುದರಿಂದ ಅಮೆರಿಕ ಖರೀದಿದಾರರು ಜವಳಿ ಸರಕನ್ನು ತರಿಸಿಕೊಳ್ಳುವುದನ್ನು ನಿಲ್ಲಿಸಿದ್ದು, ಹೊಸ ಆರ್ಡರ್ಗಳಿಗೂ ತಡೆ ನೀಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ ದೇಶದ ಜವಳಿ ಉದ್ಯಮ ಬಿಕ್ಕಟ್ಟಿಗೆ ಸಿಲುಕಿದೆ. ಹೆಚ್ಚುವರಿ ಸುಂಕಗಳ ಪರಿಣಾಮ ಪ್ರಸ್ತುತ ಜವಳಿ ಉತ್ಪನ್ನಗಳ ಮೇಲಿನ ತೆರಿಗೆ ಶೇ. 40 ರಷ್ಟಿದೆ. ಇದು 2027ರ ಆಗಸ್ಟ್ ವೇಳೆಗೆ ಶೇ. 65 ಕ್ಕೆ ಹೆಚ್ಚುವ ಸಾಧ್ಯತೆ ಇದೆ.
ಹಾಗಾಗಿ ಅಮೆರಿಕ ಖರೀದಿದಾರರು ತಮ್ಮ ಆರ್ಡರ್ಗಳನ್ನು ರದ್ದುಗೊಳಿಸುತ್ತಿದ್ದಾರೆ. ಸರ್ಕಾರ ಪ್ರಸ್ತುತ ಬಿಕ್ಕಟ್ಟನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಬೇಕು. ಟ್ರಂಪ್ ಭಾರತದ ಮೇಲಿನ ಸುಂಕವನ್ನು ಶೇ. 50 ಕ್ಕೆ ಹೆಚ್ಚಿಸಿದ್ದು, ಹೊಸ ಸುಂಕ ಜಾರಿಗೆ ಬಂದ ಬಳಿಕ ಉದ್ಯಮಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಬಹುದು. ಇಲ್ಲದಿದ್ದರೆ ಹಲವು ಉದ್ಯಮಗಳು ಮುಚ್ಚುವ ಆತಂಕವೂ ಇದೆ. ಇದೇ ವೇಳೆ ಹಲವು ಕಂಪನಿಗಳು ತಮ್ಮದೇ ಉತ್ಪಾದನಾ ಸೌಲಭ್ಯಗಳನ್ನು ಹೊಂದುವ ಮೂಲಕ ಹೊಸ ಮಾರುಕಟ್ಟೆ ಅನ್ವೇಷಿಸಲು ಯೋಚಿಸುತ್ತಿದ್ದಾರೆ. ಯುನೈಟೆಡ್ ಕಿಂಗ್ಡಮ್ೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದ ತಮ್ಮ ರಕ್ಷಣೆಗೆ ಬರುತ್ತದೆ ಎಂಬ ವಿಶ್ವಾಸದಲ್ಲಿರುವುದಾಗಿ ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಪಂಚದ ವಿರುದ್ಧ ವ್ಯಾಪಾರ ಯುದ್ಧವನ್ನು ಆರಂಭಿಸುವ ಮೂಲಕ ಟ್ರಂಪ್ ತಮ್ಮನ್ನು ತಾವು ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದು ಟ್ರಂಪ್ರ ಸುಂಕದ ನಿರ್ಧಾರ ಕಸಕ್ಕೆ ಸಮಾನ. ಅವರ ಅರ್ಥಶಾಸ್ತ್ರ ಸಂಪೂರ್ಣವಾಗಿ ತಪ್ಪಿದೆ.
ಭಾರತದ ವಿಷಯದಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಯಾವುದೇ ಪ್ರತಿಕ್ರಿಯೆ ನೀಡುವ ಮುನ್ನ ಸ್ವಲ್ಪ ಕಾಯಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಟ್ರಂಪ್ ಸುಂಕದ ಕಾರ್ಡ್ಗಳಿಂದ ನಿರ್ವಿುಸಿರುವ ಮನೆ ಕುಸಿಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸ್ವೀವ್ ಹ್ಯಾಂಕೆ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ವಿರುದ್ಧದ ಸುಂಕ ಸಮರದಿಂದಾಗಿ ಅಮೆರಿಕ ಭಾರಿ ಬೆಲೆ ತೆರಬೇಕಾಗಬಹುದು. ದಶಕಗಳಿಂದ ಭಾರತವನ್ನು ರಷ್ಯಾ ಮತ್ತು ಚೀನಾದಿಂದ ದೂರವಿರಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಆಧರೆ ರಷ್ಯಾ ತೈಲ ಖರೀದಿ ವಿಚಾರವಾಗಿ ಟ್ರಂಪ್ ಭಾರತದ ಮೇಲೆ ಸುಂಕ ವಿಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕ ವಿರುದ್ಧ ಭಾರತ, ರಷ್ಯಾ ಮತ್ತು ಚೀನಾ ಒಂದಾಗುವ ಸಾಧ್ಯತೆ ಇದೆ ಎಂದು ಟ್ರಂಪ್ರ ಮಾಜಿ ಸಹಾಯಕ ಜಾನ್ ಬೋಲ್ಟನ್ ಎಚ್ಚರಿಕೆ ನೀಡಿದ್ದಾರೆ.
ವಾಷಿಂಗ್ಟನ್: ಯೂಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 15ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ರೊಂದಿಗೆ ಸಂಧಾನ ಮಾತುಕತೆ ನಡೆಸಲಿದ್ದಾರೆ. ಅಲಸ್ಕಾದಲ್ಲಿ ಪುತಿನ್ರೊಂದಿಗೆ ರ್ಚಚಿಸುವುದಾಗಿ ಟ್ರಂಪ್ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಯುದ್ಧ ಕೊನೆಗೊಳಿಸುವ ಭಾಗವಾಗಿ ಉಭಯ ದೇಶಗಳು ಪರಸ್ಪರರ ಕೆಲವು ಪ್ರದೇಶಗಳನ್ನು ಅದಲು-ಬದಲು ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಟ್ರಂಪ್ ಅಭಿಪ್ರಾಯ ಪಟ್ಟಿದ್ದಾರೆ. ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಸಹಿತ ಸಂಬಂಧಪಟ್ಟ ಪಕ್ಷಗಾರರು, ಮೂರು ವರ್ಷಗಳ ಸಂಘರ್ಷವನ್ನು ಕೊನೆಗೊಳಿಸುವ ಕದನ ವಿರಾಮ ಒಪ್ಪಂದಕ್ಕೆ ಹತ್ತಿರವಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.