

ಪೆನ್ಸಿಲ್ವೇನಿಯಾ: ಅಮೆರಿಕಾ(America) ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಶನಿವಾರ (ಅ.5) ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಕುತೂಹಲವೆಂದರೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ರಂಪ್ ಅವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡರು.
ಪೆನ್ಸಿಲ್ವೇನಿಯಾದಲ್ಲಿ ಇದೇ ಸ್ಥಳದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಜುಲೈ 13 ರಂದು ಟ್ರಂಪ್ ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಆಗ ಗುಂಡಿನ ದಾಳಿಯ ನಂತರ ಟ್ರಂಪ್ ಭಾಷಣ ನಿಲ್ಲಿಸಿದ್ದರು. ಈಗ ಅದೇ ಸ್ಥಳದಿಂದ ತಮ್ಮ ಭಾಷಣವನ್ನು ಮತ್ತೆ ಪ್ರಾರಂಭಿಸಿದರು.
ತಮ್ಮ ಮೇಲೆ ನಡೆದ ಹತ್ಯೆಯ ಯತ್ನವನ್ನು ನೆನಪಿಸಿಕೊಂಡ ಟ್ರಂಪ್, "ನಾನು ಎಂದಿಗೂ ಬಿಡುವುದಿಲ್ಲ. ನಾನು ಎಂದಿಗೂ ತಲೆಬಾಗುವುದಿಲ್ಲ. ಸಾವಿನಲ್ಲೂ ನಾನು ಮರೆಯುವುದಿಲ್ಲ" ಎಂದು ಹೇಳಿದರು.
ವೇದಿಕೆಯ ಮೇಲೆ ಹೋದ ಎಲೋನ್ ಮಸ್ಕ್ ಕೂಡ ಟ್ರಂಪ್ಗೆ ಬೆಂಬಲ ಕೋರಿದರು. ಈ ಚುನಾವಣಾ ರ್ಯಾಲಿಯಲ್ಲಿ ಸಾವಿರಾರು ರಿಪಬ್ಲಿಕನ್ ಪಕ್ಷದ ಬೆಂಬಲಿಗರು ಭಾಗವಹಿಸಿದ್ದರು. ವೇದಿಕೆ ಮೇಲೆ ಬಂದ ಮಸ್ಕ್ ಜನರ ಮುಂದೆ ಹೋರಾಟ-ಹೋರಾಟ, ಮತ-ಮತ ಎಂಬ ಘೋಷಣೆಗಳನ್ನು ಕೂಗಿದರು. "ಅಮೆರಿಕಾದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಟ್ರಂಪ್ ಮತ್ತೊಮ್ಮೆ ಗೆಲ್ಲಬೇಕು. ಇದು ನಮ್ಮ ಜೀವಿತಾವಧಿಯ ಪ್ರಮುಖ ಚುನಾವಣೆಯಾಗಿದೆ ಎಂದು ಹೇಳಿದರು.
ಇದೇ ನ.5 ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.