ಯುಕ್ರೇನ್​ ಮೇಲಿನ ಯುದ್ಧ ನಿಲ್ಲಿಸದಿದ್ದರೆ, ರಷ್ಯಾ ಮೇಲೆ ಭಾರೀ ನಿರ್ಬಂಧ ಹೇರುವುದಾಗಿ ಟ್ರಂಪ್ ಬೆದರಿಕೆ| Donald Trump

Donald Trump,Ukraine conflict
Published on

Donald Trump: ರಷ್ಯಾವು ಯುಕ್ರೇನ್​ ಮೇಲಿನ ದಾಳಿಯನ್ನು ನಿಲ್ಲಿಸದಿದ್ದರೆ ಅಮೆರಿಕ ಮುಂದಿನ ದಿನಗಳಲ್ಲಿ ರಷ್ಯಾದ ಮೇಲೆ ದೊಡ್ಡ ನಿರ್ಬಂಧಗಳನ್ನು ಹೇರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಓವಲ್​ ಕಚೇರಿಯಲ್ಲಿ ಮಾತನಾಡಿದ ಟ್ರಂಪ್​, ಯುಕ್ರೇನ್‌ನಲ್ಲಿರುವ ಯುಎಸ್ ಒಡೆತನದ ಕಾರ್ಖಾನೆಯ ಮೇಲೆ ರಷ್ಯಾ ನಡೆಸಿದ ದಾಳಿ ಬಗ್ಗೆ ನಾನು ಸಂತೋಷವಾಗಿಲ್ಲ ಎಂದು ಟ್ರಂಪ್ ತಿಳಿಸಿದರು. ಅಲ್ಲದೆ, ಈ ಯುದ್ಧಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಟ್ರಂಪ್​, ರಷ್ಯಾ ಮತ್ತು ಉಕ್ರೇನ್‌ನ ವರ್ತನೆಗಳು ನನಗೆ ತಿಳಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ, ಯುಕ್ರೇನ್ ಮತ್ತು ರಷ್ಯಾ ನಡುವೆ​ ಶಾಂತಿ ಮಾತುಕತೆಯ ಸ್ಥಿತಿಯನ್ನು ನಿರ್ಣಯಿಸಲು ಎರಡು ವಾರಗಳ ಕಾಲಮಿತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ರಷ್ಯಾ ವಿಚಾರದಲ್ಲಿ ಅಮೆರಿಕ ಏನು ಮಾಡುತ್ತದೆ ಎಂಬುದರ ಕುರಿತು ನಾನು ನಿರ್ಧಾರ ತೆಗೆದುಕೊಳ್ಳಲಿದ್ದೇನೆ. ಇದು ಬಹಳ ಮುಖ್ಯವಾದ ನಿರ್ಧಾರವಾಗಿರುತ್ತದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಆದರೆ, ಇದು ಬೃಹತ್ ನಿರ್ಬಂಧಗಳನ್ನು ಅಥವಾ ಬೃಹತ್ ಸುಂಕಗಳನ್ನು ಹೇರಿಕೆ ಮಾಡಲಾಗದೇ ಅದು ನಮ್ಮ ಹೋರಾಟ ಎಂದು ಹೇಳುತ್ತೇವೆಯೇ? ಎಂದು ಟ್ರಂಪ್​ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಅಲಾಸ್ಕಾ ಶೃಂಗಸಭೆಯಲ್ಲಿ ತಮ್ಮ ಮತ್ತು ಪುಟಿನ್ ಅವರ ಚಿತ್ರವನ್ನು ಪ್ರದರ್ಶಿಸಿದ ಟ್ರಂಪ್, ಈ ಪೋಟೋವನ್ನು ರಷ್ಯಾ ನಾಯಕ ಕಳುಹಿಸಿದ್ದಾರೆ ಎಂದು ಹೇಳಿದ್ದರು. ಆದರೆ, ಉಕ್ರೇನ್ ಮತ್ತು ಇತರ ವಿಷಯಗಳ ಕುರಿತು ನಿರ್ಧಾರಗಳಿಗಾಗಿ ಎರಡು ವಾರಗಳ ಗಡುವು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆಗಸ್ಟ್ 18, ಯುಕ್ರೇನಿಯನ್ ಮತ್ತು ಯುರೋಪಿಯನ್ ನಾಯಕರನ್ನು ಭೇಟಿಯಾದ ನಂತರ ಟ್ರಂಪ್ ಶೃಂಗಸಭೆಯನ್ನು ಏರ್ಪಡಿಸುತ್ತಿರುವುದಾಗಿ ಹೇಳಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net