2 ಸಾವಿರ ಕೋಟಿ ವಂಚನೆ ಪ್ರಕರಣ; ಉದ್ಯಮಿ ಅನಿಲ್ ಅಂಬಾನಿಗೆ ಸೇರಿದ ಸ್ಥಳಗಳ ಮೇಲೆ ಸಿಬಿಐ ದಾಳಿ| CBI Raid

Anil Ambani
Published on

CBI Raid: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 2 ಸಾವಿರ ಕೋಟಿಗಿಂತ ಹೆಚ್ಚು ವಂಚನೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ (ಆಗಸ್ಟ್​ 23) ಸಿಬಿಐ ಅಧಿಕಾರಿಗಳು ರಿಲಯನ್ಸ್ ಕಮ್ಯುನಿಕೇಷನ್ಸ್​ ಮತ್ತು ಅದರ ನಿರ್ದೇಶಕ ಉದ್ಯಮಿ ಅನಿಲ್ ಅಂಬಾನಿಗೆ ಸೇರಿದ ಹಲವು ಸ್ಥಳಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದೆ ಎಂದು ವರದಿಯಾಗಿದೆ.

ಮುಂಬೈನ 6 ಕಡೆ ದಾಳಿ ನಡೆದಿದೆ. ಬ್ಯಾಂಕ್ ಹಣವನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗಿದೆ, ಸಾಲಗಳನ್ನು ಹೇಗೆ ಬೇರೆಡೆಗೆ ತಿರುಗಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚುವ ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳಿಗಾಗಿ ಶೋಧ ನಡೆದಿದೆ ಎನ್ನಲಾಗಿದೆ.

2,000 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟುಮಾಡಿದ್ದಕ್ಕಾಗಿ ರಿಲಯನ್ಸ್​ ಕಮ್ಯುನಿಕೇಷನ್ಸ್​ ವಿರುದ್ಧ ಎಸ್‌ಬಿಐ ಪ್ರಕರಣ ದಾಖಲಿಸಿದೆ. ಜೂನ್ 13 ರಂದು ವಂಚನೆ ಎಂದು ವರ್ಗೀಕರಿಸಿ ಜೂನ್ 24 ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗೆ ಎಸ್‌ಬಿಐ ವರದಿಯನ್ನು ಕಳುಹಿಸಿತ್ತು ಎಂದು ವರದಿಗಳು ಉಲ್ಲೇಖಿಸಿವೆ.

ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್ ಒಂದು ಖಾತೆಯನ್ನು ವಂಚನೆ ಎಂದು ವರ್ಗೀಕರಿಸಿದ ನಂತರ, ಸಾಲದಾತನು ಪತ್ತೆಯಾದ 21 ದಿನಗಳಲ್ಲಿ ಆರ್‌ಬಿಐಗೆ ವರದಿ ಮಾಡಬೇಕು. ಮತ್ತು ಪ್ರಕರಣವನ್ನು ಸಿಬಿಐ ಅಥವಾ ಪೊಲೀಸರಿಗೆ ವರದಿ ಮಾಡಬೇಕು.

ರಿಲಯನ್ಸ್​ ಕಮ್ಯೂನಿಕೇಷನ್ಸ್​​ಗೆ ಎಸ್‌ಬಿಐ ಕಳುಹಿಸಲಾದ ಪತ್ರದಲ್ಲಿ, ಸಾಲಗಳ ಬಳಕೆಯಲ್ಲಿ ವಿಚಲನ ಕಂಡುಬಂದಿದೆ. ಇದು ಬಹು ಗುಂಪು ಘಟಕಗಳಲ್ಲಿ ನಿಧಿ ಚಲನೆಗಳ ಸಂಕೀರ್ಣ ಜಾಲವನ್ನು ಒಳಗೊಂಡಿದೆ ಎಂದು ಹೇಳಿದೆ.

ನಮ್ಮ ಶೋಕಾಸ್ ನೋಟಿಸ್‌ಗೆ ಬಂದ ಉತ್ತರಗಳನ್ನು ನಾವು ಗಮನಿಸಿದ್ದೇವೆ. ಅದನ್ನು ಸರಿಯಾಗಿ ಪರಿಶೀಲಿಸಿದ ಬಳಿಕ ಸಾಲದ ದಾಖಲೆಗಳು, ಒಪ್ಪಿದ ನಿಯಮಗಳು, ಷರತ್ತುಗಳನ್ನು ಪಾಲಿಸದಿರುವಿಕೆ ಹಾಗೂ ಬ್ಯಾಂಕಿನ ತೃಪ್ತಿಗೆ RCLನ ಖಾತೆಯ ನಡವಳಿಕೆಯಲ್ಲಿ ಕಂಡುಬಂದ ಅಕ್ರಮಗಳನ್ನು ವಿವರಿಸಲು ಪ್ರತಿವಾದಿಯು ಸಾಕಷ್ಟು ಕಾರಣಗಳನ್ನು ಒದಗಿಸಿಲ್ಲ ಹೇಳಿದೆ. (ಏಜೆನ್ಸೀಸ್) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net