ಟ್ರಂಪ್​ ಸುಂಕ ಸಮರ: ಭಾರತದ ಆರ್ಥಿಕತೆ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದ ಕೇಂದ್ರ ಸಚಿವ Piyush Goyal

Piyush Goyal
Published on

ನವದೆಹಲಿ: ಜಾಗತಿಕ ಪ್ರಕ್ಷುಬ್ಧತೆಯ ಹೊರತಾಗಿಯೂ, ಭಾರತದ ಆರ್ಥಿಕತೆಯು ಗಮನಾರ್ಹ ಪ್ರಗತಿಯಾಗುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಶನಿವಾರ (ಅಕ್ಟೋಬರ್,18) ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಆಡಳಿತವು ಭಾರತೀಯ ಆಮದುಗಳ ಮೇಲಿನ ಸುಂಕಗಳನ್ನು ಉಲ್ಲೇಖಿಸಿ ದೆಹಲಿಯಲ್ಲಿ ಮಾತನಾಡಿದ ಗೋಯಲ್, ಅಂತರರಾಷ್ಟ್ರೀಯ ತೊಂದರೆಗಳ ಹೊರತಾಗಿಯೂ, ಅತ್ಯಂತ ಅಸ್ಥಿರ, ಅತ್ಯಂತ ಪ್ರಕ್ಷುಬ್ಧ ಅಂತರರಾಷ್ಟ್ರೀಯ ವಾತಾವರಣದಲ್ಲಿ, ಭಾರತವು ಎಷ್ಟು ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದರೆ ಐಎಂಎಫ್ ಸಹ ಈ ವರ್ಷ ತನ್ನ ಮುನ್ಸೂಚನೆಯನ್ನು ಶೇಕಡಾ 6.6 ಕ್ಕೆ ಪರಿಷ್ಕರಿಸಬೇಕಾಯಿತು ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಗೋಯಲ್, ಅಮೆರಿಕ ಚುನಾವಣೆಗಳು ನಡೆಯುವ ಮೊದಲಿನಿಂದಲೂ ಜಿಎಸ್‌ಟಿ ಸುಧಾರಣಾ ಯೋಜನೆ ಜಾರಿಯಲ್ಲಿದೆ. ಅಂದರೆ. ಇದಕ್ಕೂ ಸುಂಕಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವರ್ಷ ಮೊದಲ ತ್ರೈಮಾಸಿಕದಲ್ಲಿ ನಾವು ಶೇ.7.8 ರಷ್ಟು ಐತಿಹಾಸಿಕ ಬೆಳವಣಿಗೆಯನ್ನು ಕಂಡಿದ್ದೇವೆ. ಭಾರತವು ಹಣದುಬ್ಬರದಿಂದ ಪ್ರಭಾವಿತವಾಗದಂತೆ ನೋಡಿಕೊಳ್ಳಲು ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ನೀತಿ ಸ್ಥಿರ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಳೆದ ತಿಂಗಳು, ಎಂಟು ವರ್ಷಗಳಲ್ಲಿ ಅತ್ಯಂತ ಕಡಿಮೆ ಹಣದುಬ್ಬರ ದರವು ಶೇಕಡಾ 1.5 ರಷ್ಟಿತ್ತು ಎಂದಿರುವ ಗೋಯಲ್​, ಎಸ್ & ಪಿ 17 ರಿಂದ 18 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ರೇಟಿಂಗ್ ಅನ್ನು ಹೆಚ್ಚಿಸಿದೆ. ಅಲ್ಲದೆ, ಮಾರುತಿ ಸುಜುಕಿ ನವರಾತ್ರಿಯ ಮೊದಲ ಎಂಟು ದಿನಗಳಲ್ಲಿ 165,000 ವಾಹನಗಳನ್ನು ಮಾರಾಟ ಮಾಡಿದೆ ಎಂದು ಹೇಳುವ ಮೂಲಕ ಗೋಯಲ್ ಗ್ರಾಹಕರ ಬೇಡಿಕೆಯನ್ನು ಆರ್ಥಿಕ ಶಕ್ತಿಯ ಸಂಕೇತವೆಂದು ತೋರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net