

ನ್ಯೂಯಾರ್ಕ್: ಭಾರತದ ಮೇಲೆ ಹೇರಿಕೆ ಮಾಡಿರುವ ಸುಂಕಗಳನ್ನು ಕಡಿಮೆ( tariff cuts) ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತದೊಂದಿಗೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳ ಬಗ್ಗೆ ಮಂಗಳವಾರ ಕೇಳಿದಾಗ, ''ರಷ್ಯಾದ ತೈಲದಿಂದಾಗಿ ಭಾರತದ ಮೇಲೆ ಸುಂಕಗಳು ತುಂಬಾ ಹೆಚ್ಚಿವೆ ಮತ್ತು ಅವರು (ಭಾರತ) ರಷ್ಯಾದ ತೈಲವನ್ನು ಬಳಸುವುದನ್ನು ಗಣನೀಯವಾಗಿ ನಿಲ್ಲಿಸಿದ್ದಾರೆ. ಹೀಗಾಗಿ, ಭಾರತದೊಂದಿಗಿನ ನಾವು ಸುಂಕಗಳನ್ನು ಕಡಿಮೆ ಮಾಡುತ್ತೇವೆ'' ಎಂದು ಟ್ರಂಪ್ ಹೇಳಿದರು.
ಒಂದು ಹಂತದಲ್ಲಿ ಸುಂಕವನ್ನು ಇಳಿಸಲು ಅಮೆರಿಕ ಯೋಜಿಸುತ್ತಿದೆ. ಅಲ್ಲದೆ, ಭಾರತದೊಂದಿಗೆ "ನ್ಯಾಯಯುತ ಒಪ್ಪಂದ"ಕ್ಕೆ ಹತ್ತಿರವಾಗಿದೆ ಎಂದು ಹೇಳಿದರು.
ಭಾರತ - ಅಮೆರಿಕ ನಡುವಿನ ಆರ್ಥಿಕ ಮತ್ತು ಭದ್ರತಾ ಸಂಬಂಧಗಳನ್ನು ವಿಸ್ತರಿಸುವ, ಅಮೆರಿಕದ ಇಂಧನ ರಫ್ತುಗಳನ್ನು ಹೆಚ್ಚಿಸುವ ಮತ್ತು ಅಮೆರಿಕದ ಪ್ರಮುಖ ಕ್ಷೇತ್ರಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಒಪ್ಪಂದಕ್ಕೆ ಅಮೆರಿಕ ಹತ್ತಿರವಾಗುತ್ತಿದೆ ಎಂದು ಟ್ರಂಪ್ ಸೋಮವಾರ ಹೇಳಿದ್ದರು.(ಏಜೆನ್ಸೀಸ್)