Congress | ಇಂಡೋ-ಪಾಕ್​ ಯುದ್ದ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ 50 ಬಾರಿ ಹೇಳಿದ್ದಾರೆ : ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Jairam Ramesh Narendra Modi
Published on: 

Congress: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಮತ್ತು ಸುಂಕಗಳನ್ನು ತಮ್ಮ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡು ಆಪರೇಷನ್ ಸಿಂಧೂರವನ್ನು ನಿಲ್ಲಿಸಿದ್ದಾರೆ ಎಂಬ ಹೇಳಿಕೆಯು ಅರ್ಧಶತಕದ ಗಡಿ ದಾಟಿದೆ ಹಾಗೂ ಶತಕ ಗಳಿಸಲು ಹೆಚ್ಚು ಸಮಯವಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ (ಶುಕ್ರವಾರ,10) ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂವಹನ ವಿಭಾಗದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿ ನಿನ್ನೆ ಇಡೀ ದಿನ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್​ರೊಂದಿಗೆ ಮಾತನಾಡುತ್ತಾ ಅಧ್ಯಕ್ಷ ಟ್ರಂಪ್ ಪ್ರಶಂಸೆ ಮತ್ತು ಮೆಚ್ಚುಗೆಯ ಸಂದೇಶಗಳನ್ನು ಕಳುಹಿಸಿದರು ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಜೈರಾಮ್​, ಮೋದಿ ಗಾಜಾದ ಮೇಲೆ ನರಮೇಧವನ್ನು ಬಿಚ್ಚಿಟ್ಟ ವ್ಯಕ್ತಿಯನ್ನು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹುರೊಂದಿಗೆ ಮಾತನಾಡಲು ಮರೆಯಲಿಲ್ಲ ಎಂದು ಕಿಡಿಕಾರಿದ್ದಾರೆ.

ಆದರೆ, ಯುಎಸ್ ಅಧ್ಯಕ್ಷ ಟ್ರಂಪ್, ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್​ರೊಂದಿಗಿನ ಭೇಟಿಯ ಸಮಯದಲ್ಲಿ, ವ್ಯಾಪಾರ ಮತ್ತು ಸುಂಕಗಳನ್ನು ತಮ್ಮ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡು ಆಪರೇಷನ್ ಸಿಂಧೂರವನ್ನು ನಿಲ್ಲಿಸಿದ್ದೇನೆ ಎಂಬ ತಮ್ಮ ಹೇಳಿಕೆಗೆ ಅರ್ಧಶತಕದ ಗಡಿ ತಲುಪಿದರು ಎಂದು ರಮೇಶ್ ಹೇಳಿದ್ದಾರೆ.

ಇದರಲ್ಲಿ ಅಧ್ಯಕ್ಷ ಟ್ರಂಪ್ ಸ್ಥಿರ, ಪಟ್ಟುಹಿಡಿದ ಮತ್ತು ನಿರಂತರರಾಗಿದ್ದಾರೆ. ಮತ್ತು ಅವರು ಶತಕ ಗಳಿಸಲು ಹೆಚ್ಚು ಸಮಯವಿಲ್ಲ ಎಂದು ಜೈರಾಮ್​ ತಿಳಿಸಿದ್ದಾರೆ. ಭಾರತ-ಪಾಕಿಸ್ತಾನ ಸಂಘರ್ಷವನ್ನು ತಾವು ನಿಲ್ಲಿಸಿದೆ ಎಂದು ಹೇಳುವ ಟ್ರಂಪ್ ಹೇಳಿಕೆಗಳ ವೀಡಿಯೊ ತುಣುಕನ್ನು ಅವರು ಹಂಚಿಕೊಂಡಿದ್ದಾರೆ.

ಕಳೆದ ತಿಂಗಳು, ಕಳೆದ ವಾರ ವಿಶ್ವಸಂಸ್ಥೆಯ ವೇದಿಕೆಯಿಂದ ವಿಶ್ವ ನಾಯಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದೇನೆ ಎಂಬ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದರು. ಅದರೆ, ಪಾಕಿಸ್ತಾನದೊಂದಿಗಿನ ಯುದ್ಧ ನಿಲ್ಲಿಸುವ ಬಗ್ಗೆ ಎರಡೂ ಸೇನೆಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ನೇರ ಮಾತುಕತೆಯ ನಂತರ ತಿಳುವಳಿಕೆಯನ್ನು ತಲುಪಲಾಗಿದೆ ಎಂದು ಭಾರತ ನಿರಂತರವಾಗಿ ಹೇಳುತ್ತಿದೆ. (ಏಜೆನ್ಸೀಸ್)