

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತವನ್ನು ‘ಡೆಡ್ ಎಕಾನಮಿ’ ಎಂದು ಬಣ್ಣಿಸಿದ್ದು ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಯಿತು. ಆದರೆ ಅದೇ ಟ್ರಂಪ್, ಭಾರತದ ಹಲವು ನಗರಗಳಲ್ಲಿ ರಿಯಲ್ ಎಸ್ಟೇಟ್ ಬಿಜಿನೆಸ್ ನಡೆಸುತ್ತಿದ್ದಾರೆ! ಯಾವ್ಯಾವ ನಗರಗಳಲ್ಲಿ ಅವರ ಬಿಜಿನೆಸ್ ಇದೆ, ಅದರ ಸ್ವರೂಪ- ಗಾತ್ರ ಏನು ಎಂಬುದರ ವಿವರವಾದ ಮಾಹಿತಿ ಇಲ್ಲಿದೆ.
ಡೊನಾಲ್ಡ್ ಟ್ರಂಪ್ ಅವರ ಕುಟುಂಬ ಸದಸ್ಯರ ನಿಯಂತ್ರಣದಲ್ಲಿರುವ ‘ದಿ ಟ್ರಂಪ್ ಆರ್ಗನೈಸೇಷನ್’ನ ಪಾಲಿಗೆ ಅಮೆರಿಕ ಹೊರತುಪಡಿಸಿದರೆ ಭಾರತವೇ ಅತಿ ದೊಡ್ಡ ಮಾರುಕಟ್ಟೆ. ಕಳೆದ ಹತ್ತಾರು ವರ್ಷಗಳಿಂದಲೂ ಟ್ರಂಪ್ ಸಂಸ್ಥೆ ಭಾರತದ ರಿಯಲ್ ಎಸ್ಟೇಟ್ ಬಿಜಿನೆಸ್ನಲ್ಲಿ ತೊಡಗಿಸಿಕೊಂಡಿದೆ. ದೇಶದ ಹಲವಾರು ಟಾಪ್ ಬಿಲ್ಡರ್ಗಳ ಜತೆ ಪಾಲುದಾರಿಕೆ ಹೊಂದಿದೆ. ಕಳೆದ ವರ್ಷವೊಂದರಲ್ಲೇ ಮುಂಬೈ, ಪುಣೆ, ಕೋಲ್ಕತಾ, ಗುರುಗ್ರಾಮ ಮುಂತಾದೆಡೆಯ ಹಲವು ರಿಯಲ್ ಎಸ್ಟೇಟ್ ಯೋಜನೆಗಳ ಮೂಲಕ ನೂರಾರು ಕೋಟಿ ರೂ. ಲಾಭವನ್ನೂ ಟ್ರಂಪ್ ಸಂಸ್ಥೆ ಗಳಿಸಿದೆ.
ಅದರಲ್ಲೂ 8 ತಿಂಗಳುಗಳಿಂದೀಚೆಗೆ ಅದು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡುತ್ತಿದೆ. 2024ರ ನ. 5ರಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಪುನರಾಯ್ಕೆಯಾದ ಬಳಿಕ ಟ್ರಂಪ್ ಸಂಸ್ಥೆ ತನ್ನ ಭಾರತೀಯ ಪಾಲುದಾರ ಕಂಪನಿಯಾದ ಟ್ರೖೆಬೆಕಾ ಜತೆಗೂಡಿ ಬೆಂಗಳೂರು, ನೋಯ್ಡಾ, ಮುಂಬೈ, ಹೈದರಾಬಾದ್, ಪುಣೆ ಮತ್ತು ಗುರುಗ್ರಾಮದಲ್ಲಿ 6 ಹೊಸ ಯೋಜನೆಗಳನ್ನು ಘೊಷಿಸಿದೆ. ಅಲ್ಲಿ 80 ಲಕ್ಷ ಚದರಡಿಯಷ್ಟು ರಿಯಲ್ ಎಸ್ಟೇಟ್ ಡೆವಲಪ್ವೆುಂಟ್ ಮಾಡುವ ಯೋಚನೆ ಟ್ರಂಪ್ ಸಂಸ್ಥೆಗಿದೆ. ಈ ಯೋಜನೆಗಳಿಂದ ಟ್ರಂಪ್ ಸಂಸ್ಥೆ ಎಷ್ಟು ಆದಾಯ ಗಳಿಸುತ್ತಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಬಹಿರಂಗವಾಗಬೇಕಿದೆ. ಆದರೆ ತಜ್ಞರ ಪ್ರಕಾರ, ದೊಡ್ಡದೊಡ್ಡ ಬಿಲ್ಡರ್ಗಳ ಜತೆಗಿನ ಪಾಲುದಾರಿಕೆ ಮೂಲಕ ಟ್ರಂಪ್ ಸಂಸ್ಥೆ ಅನಾಯಾಸವಾಗಿ ಭಾರಿ ಲಾಭ ಮಾಡಿಕೊಳ್ಳುತ್ತಿರುವುದಂತೂ ನಿಜ.
ಭಾರತ ಈಗ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ಇಂತಹ ದೇಶದಲ್ಲಿ ಸ್ಥಳೀಯ ಬಿಲ್ಡರ್ಗಳ ಸಹಭಾಗಿತ್ವ ಸಿಕ್ಕಿರುವುದು ಟ್ರಂಪ್ ಅದೃಷ್ಟ. ಅದಲ್ಲದೆ, ಟ್ರಂಪ್ ಸಂಸ್ಥೆಗೆ ಈ ಬಿಜಿನೆಸ್ನಲ್ಲಿ ನಯಾಪೈಸೆಯ ರಿಸ್ಕ್ ಕೂಡ ಇಲ್ಲ. ದುಡ್ಡು ಎಣಿಸಿಕೊಳ್ಳುವುದೊಂದೇ ಕೆಲಸ. ಆರು ಯೋಜನೆಗಳ ಪೈಕಿ, ಒಟ್ಟು ಸುಮಾರು 43 ಲಕ್ಷ ಚದರಡಿಯ 3 ಯೋಜನೆಗಳ ಕೆಲಸವನ್ನು ಪುಣೆ, ಗುರುಗ್ರಾಮ ಮತ್ತು ಹೈದರಾಬಾದ್ನಲ್ಲಿ ಈಗಾಗಲೇ ಆರಂಭಿಸಲಾಗಿದೆ. ಟ್ರಂಪ್ ಸಂಸ್ಥೆ ಭಾರತದಲ್ಲಿ ತನ್ನ ಮೊತ್ತ ಮೊದಲ ಯೋಜನೆಯನ್ನು ಘೊಷಿಸಿದ್ದು 2012ರಲ್ಲಿ. ಕಳೆದ ವರ್ಷದ ಹೊತ್ತಿಗೆ ಸುಮಾರು 30 ಲಕ್ಷ ಚದರಡಿಯಷ್ಟು ಡೆವಲಪ್ವೆುಂಟ್ ಆಗಿತ್ತು. ಯೋಜನೆಗಳು ಪೂರ್ಣಗೊಳ್ಳುವ ಹೊತ್ತಿಗೆ ಇದು ನಾಲ್ಕು ಪಟ್ಟು ವಿಸ್ತರಣೆಯಾಗಿ 1.10 ಕೋಟಿ ಚದರಡಿಗೆ ತಲುಪುವ ಎಲ್ಲ ಸಾಧ್ಯತೆಗಳಿವೆ.
ಹೊಸ ಯೋಜನೆಗಳಲ್ಲಿ ಕನಿಷ್ಠ 15 ಸಾವಿರ ಕೋಟಿ ರೂ. ಮೌಲ್ಯದ ಅಪಾರ್ಟ್ವೆುಂಟ್ಗಳು ಮಾರಾಟವಾಗುವ ಸಾಧ್ಯತೆ ಇದೆ. ಈ ವಿಷಯವನ್ನು ಕಳೆದ ವರ್ಷದ ಮಾರ್ಚ್ ತಿಂಗಳಲ್ಲೇ ಟ್ರೖೆಬೆಕಾ ಸಂಸ್ಥೆ ತನ್ನ ಪುಣೆ ಯೋಜನೆಯ ಅನಾವರಣ ಸಮಾರಂಭದ ವೇಳೆ ಬಹಿರಂಗಪಡಿಸಿತ್ತು.
ಭಾರತದಲ್ಲಿ ಟ್ರಂಪ್ ಬ್ರ್ಯಾಂಡ್ನ ಐದು ಐಷಾರಾಮಿ ವಸತಿ ಅಪಾರ್ಟ್ವೆುಂಟ್ ಟವರ್ಗಳಿವೆ. ಮುಂಬೈ, ಪುಣೆ, ಕೊಲ್ಕತಾದಲ್ಲಿ ತಲಾ ಒಂದು ಮತ್ತು ಗುರುಗ್ರಾಮದಲ್ಲಿ ಎರಡು ಟ್ರಂಪ್ ಟವರ್ಗಳಿವೆ. ಜಗತ್ತಿನ ಬೇರಾವ ದೇಶದಲ್ಲೂ ಇಷ್ಟೊಂದು ಟ್ರಂಪ್ ಟವರ್ಗಳು ಇಲ್ಲ. ಅಷ್ಟೇ ಏಕೆ, ಅಮೆರಿಕದಲ್ಲಿ ಕೂಡ ಇವುಗಳ ಸಂಖ್ಯೆ 4 ಮಾತ್ರ. ಇವು ನ್ಯೂಯಾರ್ಕ್ ಸಿಟಿ, ಫ್ಲೋರಿಡಾದ ಸನ್ನಿ ಐಸಲ್ಸ್ ಬೀಚ್, ಷಿಕ್ಯಾಗೊ ಮತ್ತು ಲಾಸ್ ವೇಗಾಸ್ನಲ್ಲಿವೆ. ಭಾರತದಲ್ಲಿ ಇನ್ನೂ 6 ಕಡೆ ಟ್ರಂಪ್ ಟವರ್ಗಳನ್ನು 2030ರ ಒಳಗೆ ನಿರ್ವಿುಸಲು ಯೋಜಿಸಲಾಗಿದೆ. ಇವು ಬೆಂಗಳೂರು, ಮುಂಬೈ, ಪುಣೆ, ನೋಯ್ಡಾ, ಹೈದರಾಬಾದ್ ಮುಂತಾದೆಡೆ ತಲೆ ಎತ್ತಲಿವೆ. ಅವು ನಿರ್ವಣವಾದರೆ ಭಾರತದಲ್ಲಿ ಟ್ರಂಪ್ ಟವರ್ಗಳ ಒಟ್ಟು ಸಂಖ್ಯೆ ಹನ್ನೊಂದಾಗಲಿದೆ. ಇವುಗಳಲ್ಲಿ ವಸತಿ, ಕಚೇರಿ, ಗಾಲ್ಪ್ ಕೋರ್ಸ್ ಮುಂತಾದ ಸೌಲಭ್ಯಗಳು ಇರಲಿವೆ.
ಟ್ರಂಪ್ ಭಾರತದಲ್ಲಿ ಸ್ವಲ್ಪವೂ ಹಣ ಹೂಡದೇ ಬಿಜಿನೆಸ್ ಮಾಡಿ ದುಡ್ಡು ಗಳಿಸುತ್ತಾರೆ. ಆಶ್ಚರ್ಯವಾದರೂ ಇದು ಸತ್ಯ. ಇದಕ್ಕೆ ಬ್ರ್ಯಾಂಡ್ ಲೈಸೆನ್ಸಿಂಗ್ ಮಾಡೆಲ್ ಎನ್ನುತ್ತಾರೆ. ಅದರರ್ಥ ಆ ಸಂಸ್ಥೆ ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಸ್ವತಃ ಹಣ ಹೂಡಬೇಕಿಲ್ಲ. ಬದಲಿಗೆ, ಟ್ರಂಪ್ ಹೆಸರನ್ನು ಬಳಸಲು ಭಾರತೀಯ ಬಿಲ್ಡರ್ಗಳಿಗೆ ಅನುಮತಿ ನೀಡಿದರೆ ಸಾಕು. ಅದಕ್ಕೂ ಟ್ರಂಪ್ ಸಂಸ್ಥೆಯು ಪ್ರಾಜೆಕ್ಟ್ ಸೇಲ್ಸ್ನ ಶೇ. 3-5ರಷ್ಟು ಶುಲ್ಕ ಪಡೆಯುತ್ತದೆ. ಇದೊಂದರಿಂದಲೇ 2024ರಲ್ಲಿ ಟ್ರಂಪ್ ಸಂಸ್ಥೆ 175 ಕೋಟಿ ರೂ. ಗಳಿಸಿದೆ. ಭಾರತೀಯ ಬಿಲ್ಡರ್ಗಳೇ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿ, ಬೃಹತ್ ಐಷಾರಾಮಿ ಕಟ್ಟಡಗಳನ್ನು ನಿರ್ವಿುಸುತ್ತಾರೆ.
ಗುರುಗ್ರಾಮ್ಲ್ಲಿ 2018ರಲ್ಲಿ ಟ್ರೖೆಬೆಕಾ, ಎಂ3ಎಂ ಸಹಭಾಗಿತ್ವದಲ್ಲಿ ನಿರ್ವಿುಸಿದ್ದ ಟ್ರಂಪ್ ಟವರ್ನಲ್ಲಿ 258 ಲಕ್ಷುರಿ ಅಪಾರ್ಟ್ವೆುಂಟ್ಗಳನ್ನು ನಿರ್ವಿುಸಲಾಗಿತ್ತು. ಆ ಪೈಕಿ 100 ಅಪಾರ್ಟ್ ಮೆಂಟ್ಗಳು ಒಂದೇ ತಿಂಗಳಲ್ಲಿ ಮಾರಾಟವಾದವು. ಆ ಸಮಯದಲ್ಲಿ ರಿಯಲ್ ಎಸ್ಟೇಟ್ ಬಿಜಿನೆಸ್ನಲ್ಲಿ ಹಿಂಜರಿತ ಇದ್ದರೂ ಇದರ ಮೇಲೆ ಪರಿಣಾಮವಾಗಲಿಲ್ಲ. ಎನ್ಆರ್ಐಗಳು, ಭಾರಿ ಶ್ರೀಮಂತರೇ ಇವುಗಳಿಗೆ ಪ್ರಮುಖ ಗ್ರಾಹಕರು.
ಲೋಧಾ ಗ್ರೂಪ್, ಎಂ3ಎಂ, ಪಂಚಶೀಲ್ ರಿಯಾಲ್ಟಿ, ಯುನಿಮಾರ್ಕ್, ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ನಂತಹ ಬೃಹತ್ ಕಂಪನಿಗಳೇ ಟ್ರಂಪ್ ಸಂಸ್ಥೆಗೆ ಪಾಲುದಾರರು. ಕಲ್ಪೇಶ್ ಮೆಹ್ತಾ ಅವರ ಟ್ರೖೆಬೆಕಾ ಡೆವಲಪರ್ಸ್ ಭಾರತದಲ್ಲಿ ಟ್ರಂಪ್ ಬ್ರ್ಯಾಂಡ್ನ ಎಕ್ಸ್ಕ್ಲೂಸಿವ್ ಲೈಸೆನ್ಸರ್.
‘ಕಡಿಮೆ ಕಟ್ಟಡಗಳನ್ನು ನಿರ್ವಿುಸಿದರೂ ಪರವಾಗಿಲ್ಲ, ದಿ ಬೆಸ್ಟ್ ಎನ್ನುವಂತಹ ಅತ್ಯುತ್ತಮ ಗುಣಮಟ್ಟದ ಐಷಾರಾಮಿ ಕಟ್ಟಡಗಳನ್ನೇ ನಿರ್ವಿುಸಿ’ ಎನ್ನುವುದು ತಮ್ಮ ಪಾಲುದಾರರಿಗೆ ಟ್ರಂಪ್ ನೀಡಿರುವ ಸಲಹೆ.
1. ಪುಣೆ
ಕಲ್ಯಾಣಿ ನಗರದಲ್ಲಿ 23 ಅಂತಸ್ತುಗಳ ಎರಡು ಟವರ್ಗಳು. 2012ರಲ್ಲಿ ಪಂಚಶೀಲ್ ರಿಯಾಲ್ಟಿಯಿಂದ ಘೊಷಣೆ.
ಯೋಜನಾ ವೆಚ್ಚ 300 ಕೋಟಿ ರೂ. (ಅಂದಾಜು)
ಅಭಿವೃದ್ಧಿಪಡಿಸಿದ ಪ್ರದೇಶ ಸುಮಾರು 4 ಲಕ್ಷ ಚದರಡಿ
ಯೂನಿಟ್ಗಳು 46
ಪ್ರಸ್ತುತ ಸ್ಥಿತಿಗತಿ: 2015ರಲ್ಲೇ ಪೂರ್ಣ
2. ಮುಂಬೈ
ವರ್ಲಿಯಲ್ಲಿ 76 ಅಂತಸ್ತುಗಳ ಟವರ್. 2013ರಲ್ಲಿ ಲೋಧಾ ಗ್ರೂಪ್ನಿಂದ ಘೊಷಣೆ.
ಯೋಜನಾ ವೆಚ್ಚ -ಠಿ;3000 ಕೋಟಿ ಯೋಜನೆಯ ಭಾಗ
ಅಭಿವೃದ್ಧಿಪಡಿಸಿದ ಪ್ರದೇಶ ಸುಮಾರು 9 ಲಕ್ಷ ಚದರಡಿ
ಯೂನಿಟ್ಗಳು 400
ಈಗಿನ ಸ್ಥಿತಿಗತಿ: 2021ರಲ್ಲಿ ಪೂರ್ಣ
3. ಕೊಲ್ಕತಾ
ಇಎಂ ಬೈಪಾಸ್ನಲ್ಲಿ 38 ಅಂತಸ್ತುಗಳ ವಸತಿ ಟವರ್. 2017ರಲ್ಲಿ ಟ್ರೖೆಬೆಕಾ, ಯುನಿಮಾರ್ಕ್, ಆರ್ಡಿಬಿ ಗ್ರೂಪ್ನಿಂದ ಘೊಷಣೆ.
ಯೋಜನಾ ವೆಚ್ಚ ಅಂದಾಜು 400 ಕೋಟಿ ರೂ.
ಅಭಿವೃದ್ಧಿಪಡಿಸುವ ಪ್ರದೇಶ ಸುಮಾರು 4 ಲಕ್ಷ ಚದರಡಿ
ಯೂನಿಟ್ಗಳು 137
ಪ್ರಸ್ತುತ ಸ್ಥಿತಿಗತಿ: ಹಲವು ಡೆಡ್ಲೈನ್ಗಳು ಮಿಸ್ಡ್; 2026ರ ಜೂನ್ ಒಳಗೆ ಪೂರ್ಣಗೊಳ್ಳುವ ಸಾಧ್ಯತೆ
4. ದೆಹಲಿ ಎನ್ಸಿಆರ್, ಗುರುಗ್ರಾಮ
47 ಅಂತಸ್ತುಗಳ ಟವರ್ಗಳು. 2018ರಲ್ಲಿ ಟ್ರೖೆಬೆಕಾ-ಎಂ3ಎಂ ಗ್ರೂಪ್ನಿಂದ ಘೊಷಣೆ.
ಯೋಜನಾ ವೆಚ್ಚ 1900 ಕೋಟಿ ರೂ.
ಅಭಿವೃದ್ಧಿಪಡಿಸುವ ಪ್ರದೇಶ ಅಂದಾಜು 12 ಲಕ್ಷ ಚದರಡಿ
ಯೂನಿಟ್ಗಳು 268 (ಸೋಲ್ಡ್ಔಟ್)
ಈಗಿನ ಸ್ಥಿತಿಗತಿ: ಹಲವು ಡೆಡ್ಲೈನ್ಗಳು ಮಿಸ್ಡ್; 2026ರ ಆರಂಭದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ
5. ಮುಂಬೈ
ಚೌಪಾಟಿಯಲ್ಲಿ 45-60 ಅಂತಸ್ತುಗಳ ವಸತಿ ಟವರ್. 2011ರಲ್ಲಿ ಟ್ರಂಪ್ ಆರ್ಗನೈಸೇಷನ್ ಮತ್ತು ರೋಹನ್ ಲ್ಯಾಂಡ್ಸ್ಕೇಪ್ಸ್ನಿಂದ ಘೊಷಣೆ.
ಪ್ರಸ್ತುತ ಸ್ಥಿತಿಗತಿ: ಎರಡು ಪ್ಲಾಟ್ಗಳನ್ನು ಜೋಡಿಸುವುದಕ್ಕೆ ಅನುಮತಿ ಸಿಗದ ಕಾರಣ ವಿಳಂಬ
ಗಾಲ್ಪ್ ಕೋರ್ಸ್ ಎಕ್ಸ್ಟೆನ್ಷನ್ ರಸ್ತೆಯಲ್ಲಿ ಅತ್ಯಾಧುನಿಕ ಆಫೀಸ್ ಟವರ್ ನಿರ್ವಣ. ಬ್ರ್ಯಾಂಡಿಂಗ್ ಮತ್ತು ಡಿಸೈನ್ಗಾಗಿ 2016ರ ಏಪ್ರಿಲ್ನಲ್ಲಿ ಐಆರ್ಇಒ ಜತೆ ಟ್ರಂಪ್ ಆರ್ಗನೈಸೇಷನ್ ಒಪ್ಪಂದ.
ಈಗಿನ ಸ್ಥಿತಿಗತಿ: ಸ್ಥಳದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ.
ಅಮೆರಿಕದ ಅಧ್ಯಕ್ಷರ ಹೆಸರು ತಳಕು ಹಾಕಿಕೊಂಡಿ ರುವುದರಿಂದ ಸಹಜವಾಗಿಯೇ ಈ ಟವರ್ಗಳಲ್ಲಿನ ಅಪಾರ್ಟ್ವೆುಂಟ್ಗಳು ದುಬಾರಿ ಪ್ರೀಮಿಯಂ ಬೆಲೆಯಲ್ಲಿ ಮಾರಾಟವಾಗುತ್ತವೆ. ಬೇರೆ ಕಂಪನಿಗಳ ಐಷಾರಾಮಿ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿನ ಬೆಲೆಗಿಂತ ಇವುಗಳ ಬೆಲೆ ಶೇ. 30ರಷ್ಟು ಹೆಚ್ಚು. ಉದಾಹರಣೆಗೆ, ಮುಂಬೈನ ಟ್ರಂಪ್ ಟವರ್ನಲ್ಲಿರುವ ಅಪಾರ್ಟ್ವೆುಂಟ್ಗಳು 2024ರಲ್ಲಿ ಚದರಡಿಗೆ 60ರಿಂದ 68 ಸಾವಿರ ರೂ. ಬೆಲೆಗೆ ಮಾರಾಟವಾಗಿವೆ.
ಅಪಾರ್ಟ್ವೆುಂಟ್ ಒಳಗಿನಿಂದ ಇಡೀ ನಗರದ ದರ್ಶನ ಮಾಡಿಸುವ ‘360 ಡಿಗ್ರಿ ಸಿಟಿ ವ್ಯೂವ್’ ಟ್ರಂಪ್ ಟವರ್ಗಳ ವಿಶೇಷಗಳಲ್ಲೊಂದು. ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಪರಿಣತ ಆರ್ಕಿಟೆಕ್ಟ್ಗಳನ್ನೇ ನೇಮಿಸಿಕೊಳ್ಳಲಾಗಿರುತ್ತದೆ.
ಟ್ರೖೆಬೆಕಾ ಡೆವಲಪರ್ಸ್ನ ಕಲ್ಪೇಶ್ ಮೆಹತಾ ಅವರನ್ನು ಡೊನಾಲ್ಡ್ ಟ್ರಂಪ್ ಜೂನಿಯರ್ ಅವರಿಗೆ ಭೇಟಿ ಮಾಡಿಸಿ ದವರು ವ್ಹಾರ್ಟನ್ ಸ್ಕೂಲ್ನ ಒಬ್ಬ ಪ್ರೊಫೆಸರ್. ಸುಮಾರು 15 ವರ್ಷಗಳ ಹಿಂದೆ. ಅದೂ ನ್ಯೂಯಾರ್ಕ್ನ ಒಂದು ಬಾರ್ನಲ್ಲಿ. ಅಲ್ಲಿದ್ದ ಕಾಕ್ಟೇಲ್ ನ್ಯಾಪ್ಕಿನ್ ಮೇಲೆಯೇ ಮೊದಲ ಡೀಲ್ನ ವಿವರಗಳನ್ನು ಬರೆದುಕೊಳ್ಳಲಾಗಿತ್ತಂತೆ!