

Rahul Gandhi: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ಮಧ್ಯಸ್ಥಿಕೆ ವಹಿಸಿರುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೆ ಹೇಳಿಕೊಳ್ಳುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ ಎಂದು ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಇದನ್ನೂ ಓದಿ:ಬಿಎಂಎಸ್ಆರ್ಎ ಕಾಸರಗೋಡು ಜಿಲ್ಲಾ ಸಮ್ಮೇಳ
ಸಂಸತ್ತಿನಲ್ಲಿ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದರು, ಈಗಾಗಲೇ ಟ್ರಂಪ್ ಸುಮಾರು 25 ಬಾರಿ ಈ ಹೇಳಿಕೆ ನೀಡಿದ್ದಾರೆ. ಆದರೆ, ಭಾರತದ ಪ್ರಧಾನಿ ಮೌನವಾಗಿದ್ದಾರೆ. ಇದು ಸರ್ಕಾರದ ನಿರೂಪಣೆಯ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಕದನ ವಿರಾಮವನ್ನು ಜಾರಿಗೆ ತರಲು ಟ್ರಂಪ್ ಯಾರು? ಅದು ಅವರ ಕೆಲಸವಲ್ಲ ಎಂದರು.
ಒಂದು ಕಡೆ ನೀವು ಆಪರೇಷನ್ ಸಿಂಧೂರ ನಡೆಯುತ್ತಿದೆ ಎಂದು ಹೇಳುತ್ತೀರಿ.. ಮತ್ತೊಂದೆಡೆ, ಗೆಲುವು ಸಾಧಿಸಲಾಗಿದೆ ಎಂದು ಹೇಳುತ್ತೀರಿ. ಆದರೆ, ಟ್ರಂಪ್ ಮಾತ್ರ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಏನೋ ತಿಳಿಯದಾಗಿದೆ ('ಕುಚ್ ತೋ ದಾಲ್ ಮೇ ಕಲಾ ಹೈ ನಾ) ಎಂದು ಹಿಂದಿ ಭಾಷಾವೈಶಿಷ್ಟ್ಯವನ್ನು ಬಳಸಿಕೊಂಡು ಅನುಮಾನ ವ್ಯಕ್ತಪಡಿಸಿದರು.
ಇದೇ ವೇಳೆ ಆಪರೇಷನ್ ಸಿಂಧೂರ ನಂತರದ ಭಾರತದ ವಿದೇಶಾಂಗ ನೀತಿಯ ಬಗ್ಗೆ ಪ್ರಶ್ನಿಸಿದ ರಾಹುಲ್ ಗಾಂಧಿ, ಯಾವುದೇ ದೇಶವು ಭಾರತವನ್ನು ರಾಜತಾಂತ್ರಿಕವಾಗಿ ಬೆಂಬಲಿಸಿಲ್ಲ ಎಂದು ಆರೋಪಿಸಿದರು.ಟ್ರಂಪ್ ನೀಡುತ್ತಿರುವ ಹೇಳಿಕೆಯಿಂದಾಗಿ ಪ್ರಧಾನಿ ಮೋದಿ ಸಂಸತ್ತನ್ನು ತಪ್ಪಿಸುವಂತಾಗಿದೆ ಎಂದರು.
ಬುಧವಾರ(ಜು.23) ನ್ಯೂಯಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ದೊಡ್ಡ ಯುದ್ಧವನ್ನು ತಡೆದಿದ್ದೇನೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದರು.
ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಘಟನೆಗೆ ಆಪರೇಷನ್ ಸಿಂಧೂರ ಭಾರತದ ಪ್ರತಿಕ್ರಿಯೆಯಾಗಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆದವು. ಗಡಿಯಾಚೆಗಿನ ತೀವ್ರ ಘರ್ಷಣೆಯ ನಂತರ ಮೇ.10 ರಂದು ಎರಡೂ ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಬಂದವು.(ಏಜೆನ್ಸೀಸ್)