

Jake Sullivan: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕ್ನೊಂದಿಗಿನ ಸ್ನೇಹಕ್ಕೆ ಭಾರತದೊಂದಿಗಿನ ಸಂಬಂಧವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜೇಕ್ ಸುಲ್ಲಿವನ್ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾಜಿ ಯುಎಸ್ನ ಎನ್ಎಸ್ಜಿ, ದಶಕಗಳ ಹಿಂದೆಯೇ, ದ್ವಿಪಕ್ಷೀಯ ವ್ಯಾಪಾರದ ಆಧಾರದ ಮೇಲೆ, ಯುನೈಟೆಡ್ ಸ್ಟೇಟ್ಸ್ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದೊಂದಿಗೆ ತನ್ನ ಸಂಬಂಧವನ್ನು ನಿರ್ಮಿಸಲು ಕೆಲಸ ಮಾಡಿದೆ. ಅಲ್ಲದೆ, ತಂತ್ರಜ್ಞಾನ, ಅರ್ಥಶಾಸ್ತ್ರ ಮತ್ತು ಇತರ ಹಲವು ವಿಷಯಗಳಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕಾದ ದೇಶವಾಗಿದೆ. ಚೀನಾದ ಬೆದರಿಕೆಯನ್ನು ಎದುರಿಸುವಲ್ಲಿ ಭಾರತ ಪಾತ್ರ ದೊಡ್ಡದಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಟ್ರಂಪ್ರೊಂದಿಗೆ ಪಾಕ್ ವ್ಯವಹಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಇಚ್ಛಿಸುತ್ತಿರುವುದರಿಂದ, ಟ್ರಂಪ್ ಭಾರತದೊಂದಿಗಿನ ಸಂಬಂಧವನ್ನು ಬದಿಗಿಟ್ಟಿದ್ದಾರೆ ಎಂದು ಅಮೆರಿಕದ ಮಾಜಿ ಅಧಿಕಾರಿ ಸ್ಟಷ್ಟಪಡಿಸಿದ್ದಾರೆ.
ಭಾರತದೊಂದಿಗಿನ ಸಂಬಂಧಗಳನ್ನು ತ್ಯಾಗ ಮಾಡುವ ಟ್ರಂಪ್ ಕ್ರಮವು ಸ್ವತಃ ಒಂದು ದೊಡ್ಡ ಕಾರ್ಯತಂತ್ರದ ಹಾನಿಯಾಗಿದೆ. ಏಕೆಂದರೆ, ಭಾರತದೊಂದಿಗಿನ ಅಮೆರಿಕದ ಸಂಬಂಧವು ನಮ್ಮ ಹಿತಾಸಕ್ತಿಗಳನ್ನು ಪೂರೈಸುತ್ತದೆ ಎಂದು ಮಾಜಿ ಎನ್‌ಎಸ್‌ಎ ತಿಳಿಸಿದ್ದಾರೆ. ಅಲ್ಲದೆ, ಈಗ ಜಗತ್ತಿನ ಪ್ರತಿಯೊಂದು ದೇಶವೂ ಅಮೆರಿಕವನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ಮಾತು ನಮ್ಮ ಬಂಧವಾಗಿರಬೇಕು. ನಾವು ಹೇಳುವುದಕ್ಕೆ ನಾವು ಬದ್ದವಾಗಿರಬೇಕು. ಆದರಿಂದ ನಮ್ಮ ಸ್ನೇಹಿತರು ನಮ್ಮ ಮೇಲೆ ಅವಲಂಬಿತರಾಗಲು ಸಾಧ್ಯವಾಗುತ್ತದೆ. ಇದು ಯಾವಾಗಲೂ ನಮ್ಮ ಶಕ್ತಿಯಾಗಿದೆ. ಭಾರತದೊಂದಿಗೆ ಈಗ ಏನು ನಡೆಯುತ್ತಿದೆ ಎಂಬುದು ದೊಡ್ಡ ಪರಿಣಾಮ ಬೀರುತ್ತದೆ. ಆದರೆ ಇದು ಪ್ರಪಂಚದಾದ್ಯಂತದ ನಮ್ಮ ಎಲ್ಲಾ ಸಂಬಂಧಗಳು ಮತ್ತು ಪಾಲುದಾರಿಕೆಗಳ ಮೇಲೆ ಪರಿಣಾಮವನ್ನು ಬೀರಲಿದೆ ಎಂದು ಜೇಕ್ ಸುಲ್ಲಿವನ್ ಹೇಳಿದ್ದಾರೆ.
ಅಮೆರಿಕ ಮತ್ತು ಪಾಕಿಸ್ತಾನಗಳು ವರ್ಷಗಳ ಕಾಲ ರಾಜತಾಂತ್ರಿಕವಾಗಿ ದೂರ ಉಳಿದ ನಂತರ, ಇತ್ತೀಚೆಗೆ ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಶ್ವೇತಭವನದಲ್ಲಿ ಸ್ವಾಗತಿಸಿ ವ್ಯಾಪಾರ, ಆರ್ಥಿಕ ಅಭಿವೃದ್ಧಿ ಮತ್ತು ಕ್ರಿಪ್ಟೋಕರೆನ್ಸಿ ಕುರಿತು ಚರ್ಚಿಸಿದಾಗ ಅಮೆರಿಕ-ಭಾರತದ ಸಂಬಂಧಗಳು ಮತ್ತಷ್ಟು ಹದಗೆಟ್ಟವು.
ಕಳೆದ ಜುಲೈನಲ್ಲಿ, ಟ್ರಂಪ್ ಆಡಳಿತವು ಪಾಕಿಸ್ತಾನದೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಿತು. ಇಸ್ಲಾಮಾಬಾದ್ನಲ್ಲಿ ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ಸಹಾಯ ಮಾಡುತ್ತದೆ ಎಂದು ಹೇಳಿತು. ಇದೇ ಸಮಯದಲ್ಲಿ, ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ25 ರಷ್ಟು ಸುಂಕವನ್ನು ವಿಧಿಸಿತು. (ಏಜೆನ್ಸೀಸ್)