

Tariffs: ಭಾರತ ಶೇ.25 ರಷ್ಟು ಸುಂಕವನ್ನು ಅಮೆರಿಕಕ್ಕೆ ಪಾವತಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿಗೆ ಘೋಷಿಸಿದ್ದರು. ಇದು ಎರಡು ದೇಶಗಳ ನಡುವಿನ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬಿರಿದೆ. ಇದರ ನಡುವೆ ಭಾರತ-ರಷ್ಯಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದ ಟ್ರಂಪ್, ರಷ್ಯಾದೊಂದಿಗೆ ಭಾರತ ತೈಲ ಖರೀದಿಸುವುದನ್ನು ನಿಲ್ಲಿಸಿದ್ರೆ ಒಳ್ಳೆಯದು ಎಂದಿದ್ದರು. ಆದರೆ, ಭಾರತ ಮಾತ್ರ ರಷ್ಯಾದೊಂದಿಗೆ ಭಾರತ ತೈಲ ಖರೀದಿ ನಿಲ್ಲಿಸಿಲ್ಲ. ಈ ಹಿನ್ನೆಲೆ ಇದೀಗ ಗಣನೀಯವಾಗಿ ಸುಂಕ ಹೆಚ್ಚಳ ಮಾಡುವುದಾಗಿ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
"ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುವುದಲ್ಲದೆ, ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ. ಈ ಕಾರಣದಿಂದಾಗಿ, ಭಾರತವು ಅಮೆರಿಕಕ್ಕೆ ಪಾವತಿಸುವ ಸುಂಕವನ್ನು ನಾನು ಗಣನೀಯವಾಗಿ ಹೆಚ್ಚಿಸುತ್ತೇನೆ. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು!!!" ಎಂದು ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ ಬರೆದಿದ್ದಾರೆ.
ಯುಕ್ರೇನ್ ಮೇಲೆ ನಿರಂತರವಾಗಿ ಯುದ್ಧ ನಡೆಸುತ್ತಿರುವ ರಷ್ಯಾ ಜೊತೆಗೆ ಭಾರತ ಕೈಜೋಡಿಸಿರುವ ವಿಷಯ ಟ್ರಂಪ್ಗೆ ಹಿಡಿಸಲಿಲ್ಲ. ದೊಡ್ಡ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತ ಸರ್ಕಾರದ ನಿರ್ಧಾರ ಅಮೆರಿಕ ಅಧ್ಯಕ್ಷರಿಗೆ ಸರಿ ಅನಿಸಲಿಲ್ಲ. ರಷ್ಯಾ, ಯುಕ್ರೇನ್ ವಿರುದ್ಧದ ದಾಳಿ ನಿಲ್ಲಿಸಬೇಕು ಎಂದರೆ ಇತರೆ ದೇಶಗಳು ಅವರೊಂದಿಗೆ ವ್ಯಾಪಾರ-ವಹಿವಾಟು ನಡೆಸಬಾರದು ಎಂಬುದು ಟ್ರಂಪ್ ಉದ್ದೇಶ. ಆದರೆ, ಇದನ್ನೂ ಮೀರಿ ಭಾರತ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವುದು ಟ್ರಂಪ್ ಸುಂಕ ಸಮರ ಮತ್ತು ಹೆಚ್ಚುವರಿ ದಂಡಕ್ಕೆ ಕಾರಣವಾಗಿದೆ,(ಏಜೆನ್ಸೀಸ್).