ಮೆಸರ್ಸ್ ಅಕಾನ್ ಕಂಪನಿಯ ಮುಖ್ಯಸ್ಥನಿಗೆ ಸಂಕಷ್ಟ : ವಂಚನೆ ಆರೋಪದ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ನಕಾರ

highcourt
Published on

ಬೆಂಗಳೂರು:   ದೋಷಪೂರಿತ ಸಾಧನಗಳನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ರಕ್ಷಣಾ ಏವಿಯೋನಿಕ್ಸ್ ಸಂಶೋಧನಾ ಸಂಸ್ಥೆ (ಡಿಎಆರ್‌ಇ)ಗಳಿಗೆ ಪೂರೈಕೆ ಮಾಡಿ ವಂಚನೆ ಎಸಗಿದ್ದ ಆರೋಪ ಎದುರಿಸುತ್ತಿರುವ ಅಮೆರಿಕಾ ಮೂಲದ ಮೆಸರ್ಸ್ ಅಕಾನ್ ಕಂಪನಿಮುಖ್ಯಸ್ಥ ಸೂರ್ಯ ಸರೀನ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣ ರದ್ದು ಕೋರಿ 76 ವರ್ಷದ ಸೂರ್ಯ ಸರೀನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ‘‘ಅರ್ಜಿದಾರರ ವಿರುದ್ಧ ಆರೋಪಗಳನ್ನು ಲಭ್ಯವಿರುವ ಸಾಕ್ಷಾೃಧಾರಗಳು ಮೇಲ್ನೋಟಕ್ಕೆ ಸಾಭೀತುಪಡಿಸುತ್ತದೆ.ಆದ್ದರಿಂದ, ವಿಚಾರಣೆಯ ಈ ಹಂತದಲ್ಲಿ ಹಸ್ತಕ್ಷೇಪ ಮಾಡುವುದು ಸುಪ್ರೀಂಕೋರ್ಟ್‌ನ ತೀರ್ಪಿನ ಉಲ್ಲಂಘನೆಯಾಗುತ್ತದೆ’ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ದೂರು, ಆರೋಪಪಟ್ಟಿ ಮತ್ತು ಸಾಕ್ಷಿಗಳ ಹೇಳಿಕೆಯನ್ನು ಪರಿಶೀಲಿಸಿದ ನ್ಯಾಯಪೀಠವು, ‘‘ಆರೋಪಪಟ್ಟಿಯ ಸಾರಾಂಶ, ಪ್ಯಾರಾಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಪೂರ್ಣವಾಗಿ ಗಮನಿಸಿದರೆ, ಅರ್ಜಿದಾರರ ಪಾತ್ರವು ಸ್ಪಷ್ಟವಾಗಿ ಹೊರಹೊಮ್ಮುತ್ತದೆ. ಸಾಕ್ಷಿ ಹೇಳಿಕೆಗಳು ಅರ್ಜಿದಾರರು ಏನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತವೆ’ ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net