ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೈಲರ್‌ ಬಿಡುಗಡೆ; ದಳಪತಿಗೆ ನಾಯಕಿಯಾದ ನಟಿ ತ್ರಿಶಾ

tttt
Published on

ತಮಿಳಿನ ಲಿಯೋ ಸಿನಿಮಾ ಕನ್ನಡ, ತೆಲುಗು, ಹಿಂದಿಗೆ ಡಬ್​ ಆಗಿ ಬಿಡುಗಡೆ ಆಗುತ್ತಿದೆ. ಈ ಎಲ್ಲ ಭಾಷೆಗಳಲ್ಲಿ ಟ್ರೇಲರ್​ (Leo Trailer) ಬಿಡುಗಡೆ ಮಾಡಲಾಗಿದೆ. ಸಂಜಯ್​ ದತ್​, ಅರ್ಜುನ್ ಸರ್ಜಾ, ದಳಪತಿ ವಿಜಯ್​ ಮುಂತಾದವರು ಈ ಟ್ರೇಲರ್​ನಲ್ಲಿ ಅಬ್ಬರಿಸಿದ್ದಾರೆ. ಈ ಸಿನಿಮಾಗೆ ತ್ರಿಷಾ ಕೃಷ್ಣನ್​ ನಾಯಕಿ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ‘ಲಿಯೋ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.


ಇದೀಗ ಚಿತ್ರದಲ್ಲಿ ದಳಪತಿಗೆ ಜೊತೆಯಾಗಿ ತ್ರಿಶಾ ಕೃಷ್ಣನ್ ನಾಯಕಿಯಾಗಿ ನಟಿಸಿದ್ದರೆ, ಸಂಜಯ್ ದತ್ ಮತ್ತು ಅರ್ಜುನ್ ಸರ್ಜಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಲಿಯೋ ಟ್ರೇಲರ್​​​ ವೀಕ್ಷಿಸಿದವರಿಗೆ ಇದೊಂದು ಆಕ್ಷನ್ ಥ್ರಿಲ್ಲರ್ ಅನ್ನೋದು ಗೊತ್ತಾಗುತ್ತೆ. ಒಂದೆಡೆ ಆ್ಯಕ್ಷನ್ ಹೈಲೈಟ್ ಆದ್ರೆ ಇನ್ನೊಂದೆಡೆ ಚಿತ್ರದ ಕಥೆ ಏನು? ಎಂಬ ಕುತೂಹಲ ಕೆರಳಿಸುತ್ತಿದೆ. ಅಲ್ಲದೆ ಈ ಚಿತ್ರದಲ್ಲಿ ವಿಜಯ್ ಡ್ಯುಯಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬ ಅನುಮಾನ ಮೂಡಿಸಿದೆ.


ವಿಜಯ್‌ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎನ್ನುವ ಹಲವು ಪ್ರಶ್ನೆಗಳನ್ನು ಟ್ರೇಲರ್‌ ಹುಟ್ಟುಹಾಕಿದೆ. ವಿಜಯ್ ಅವರನ್ನು ಲಿಯೋಡಾಸ್ ಮತ್ತು ಪಾರ್ತಿ ಎಂಬ ಎರಡು ಪಾತ್ರಗಳಲ್ಲಿ ತೋರಿಸಲಾಗಿದೆ. ಸದ್ಯ ಸಿನಿಮಾ, ರಿಲೀಸ್​​ ಬಳಿಕವಷ್ಟೆ ವಿಚಾರ ತಿಳಿದು ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net