ತೆಲುಗಿನ ಸಿನಿಮಾವೊಂದರಲ್ಲಿ ತಾಯಿಯಾಗಿ ನಟಿಸುತ್ತಾರಾ ‘ಪವರ್‌’ ಚಿತ್ರದ ನಟಿ ತ್ರಿಷಾ?

tnc
Published on

ನವನಟಿಯರನ್ನು ನಾಚಿಸೋ ಹಾಗೆಯೇ ಇರುವ ತ್ರಿಷಾಗೆ ಸ್ಟಾರ್ ನಟನಿಗೆ ತಾಯಿಯಾಗುವ ಆಫರ್ ಸಿಕ್ಕಿದೆಯಂತೆ. ‘ಪೊನ್ನಿಯನ್ ಸೆಲ್ವನ್ 2 ಚಿತ್ರದ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳು ತ್ರಿಷಾ ಕೃಷ್ಣನ್‌ಗೆ ಅರಸಿ ಬರುತ್ತಿದೆ.


ಮಲಯಾಳಂ ‘ಬ್ರೋ ಡ್ಯಾಡಿ’ ಸಿನಿಮಾ ತೆಲುಗಿಗೆ ರಿಮೇಕ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಶ್ರೀಲೀಲಾ ಹೊಸ ಚಿತ್ರಕ್ಕೆ ಹೀರೋ ಆಗಿ ಶರ್ವಾನಂದ್ ಕಾಣಿಸಿಕೊಳ್ತಿದ್ದಾರೆ. ಶರ್ವಾನಂದ್ ತಾಯಿಯ ಪಾತ್ರಕ್ಕೆ ತ್ರಿಷಾ ಅವರನ್ನ ಕೇಳಲಾಗಿದೆ. ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತ್ರಿಷಾಗೆ ನಟಿಸಲು ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.


39ನೇ ವಯಸ್ಸಿನ ನಟ ಶರ್ವಾನಂದ್‌ಗೆ ತಾಯಿಯಾಗಿ ನಟಿಸುತ್ತಾರಾ ಎಂಬ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. 40ನೇ ವರ್ಷದ ವಯಸ್ಸಿನಲ್ಲೂ 20ರ ಯುವತಿಯಂತೆ ಕಾಣೋ ತ್ರಿಷಾ, ಶ್ರೀಲೀಲಾ, ಶರ್ವಾನಂದ್ ಹೊಸ ಚಿತ್ರಕ್ಕೆ ತ್ರಿಷಾ ಕೈಜೋಡಿಸ್ತಾರಾ ಎಂಬುದನ್ನ ಕಾದುನೋಡಬೇಕಿದೆ.


ಪೊನ್ನಿಯನ್ ಸೆಲ್ವನ್ 2’ ನಂತರ ವಿಜಯ್ ದಳಪತಿ ನಟನೆಯ ‘ಲಿಯೋ’ ಸಿನಿಮಾಗೆ ತ್ರಿಷಾ ನಾಯಕಿಯಾಗಿದ್ದು, ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net