93ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ತ್ರಿವಳಿಗಳು; ಆರೋಗ್ಯದ ಗುಟ್ಟೇನೆಂದು ಕೇಳಿದ ನೆಟ್ಟಿಗರು…

viralNews
Published on

ನವದೆಹಲಿ: ಮೂವರು ಸಹೋದರರು (ತ್ರಿವಳಿ)ಗಳು ತಮ್ಮ 93 ನೇ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿಕೊಂಡಿದ್ದಾರೆ. ಅತ್ಯಂತ ಆರೋಗ್ಯವಂತ ಮೂವರು ವಿಶ್ವದ ಅತ್ಯಂತ ಹಳೆಯ ತ್ರಿವಳಿಗಳಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಇವರ ಆರೋಗ್ಯದ ಗುಟ್ಟೇನು ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

ಅಮೆರಿಕದ ಕಾನ್ಸಾಸ್‌ನ ಕ್ಯಾಲ್ವೆಸ್ಟಾದಲ್ಲಿ ಜನಿಸಿದರು. ಡಿಸೆಂಬರ್ 1 ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡ ಮೂವರು ವಿಶ್ವದ ಅತ್ಯಂತ ಹಿರಿಯ ತ್ರಿವಳಿ (ಪುರುಷ) ಎಂಬ ಗಿನ್ನಿಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಈ ಮೂವರು ತಮ್ಮ ಸುದೀರ್ಘ ಮತ್ತು ಆರೋಗ್ಯಕರ ಜೀವನದ ರಹಸ್ಯವನ್ನು ಸಹ ಹಂಚಿಕೊಂಡಿದ್ದಾರೆ.

ಲ್ಯಾರಿ ಆಲ್ಡೆನ್ ಬ್ರೌನ್, ಲೋನ್ ಬರ್ನಾರ್ಡ್ ಬ್ರೌನ್ ಮತ್ತು ಜೀನ್ ಕರೋಲ್ ಬ್ರೌನ್ ಬಾಲ್ಯದಿಂದಲೂ ಬಹಳ ಆತ್ಮೀಯರಾಗಿದ್ದರು. ಧೂಮಪಾನ ಮತ್ತು ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳು ಇಲ್ಲ. ಇತ್ತೀಚಿಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಲೀಕರು ತಮ್ಮ ಬಾಲ್ಯದ ಫೋಟೋಗಳೊಂದಿಗೆ ತಮ್ಮ ಇತ್ತೀಚಿನ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಮೂವರು ಸಹೋದರರು ಕಳೆದ ವರ್ಷ ತಮ್ಮ 92ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಸಮಾರಂಭಕ್ಕೆ ಕುಟುಂಬದ ಸದಸ್ಯರೆಲ್ಲರೂ ಸೇರಿದ್ದರು. ಅವರಿಗೆ ನಾಲ್ಕು ಹಿರಿಯ ಸಹೋದರರು, ಮೂವರು ಕಿರಿಯ ಸಹೋದರರು ಮತ್ತು ಒಬ್ಬ ಸಹೋದರಿ ಇದ್ದರು. ಎಲ್ಲರೂ ಸತ್ತಿದ್ದಾರೆ. ಅವರಿಗೆ 9 ಮಕ್ಕಳು, 20 ಮೊಮ್ಮಕ್ಕಳು ಮತ್ತು 25 ಮರಿ ಮೊಮ್ಮಕ್ಕಳು ಇದ್ದಾರೆ. ಈ ತ್ರಿವಳಿಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 'ಮೂವರು ಅಜ್ಜಂದಿರಿಗೆ ಅಭಿನಂದನೆಗಳು... ಜನ್ಮದಿನದ ಶುಭಾಶಯಗಳು' ಎಂದು ನೆಟಿಜನ್‌ಗಳು ಕಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net