

ಮೊಹಾಲಿ: ಕಳ್ಳನೊರ್ವ ಕಾರಿನಲ್ಲಿದ್ದ 25 ಲಕ್ಷ ರೂ.ದೋಚಿ ಪರರಾರಿಯಾದ ಘಟನೆ ಪಂಜಾಬ್ನ ಮೊಹಾಲಿಯಲ್ಲಿ ನಡೆದಿದೆ.
ರಾತ್ರಿ 8.30ರ ಸಮಯದಲ್ಲಿ ಮಹೇಶ್ ಜೈನ್ ಎಂಬ ವ್ಯಕ್ತಿ ತನ್ನ ಕಾರಿನಲ್ಲಿ ಮನೆಯ ಕಡೆ ಹೊರಟಿದ್ದರು. ಈ ವೇಳೆ ಟ್ರಾಫಿಕ್ ಸಿಗ್ನಲ್ ಇದ್ದಿದ್ದರಿಂದ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಹೊಂಚು ಹಾಕಿದ್ದ ಕಳ್ಳ ನಿಮ್ಮ ಕಾರಿನ ಟ್ಯಾಂಕ್ ಲೀಕ್ ಆಗುತ್ತಿದೆ ಎಂದು ಹೇಳಿದ್ದಾನೆ.
ಕೂಡಲೇ ಗಾಬರಿಯಾಗಿ ಇಳಿದು ಟ್ಯಾಂಕ್ ಪರಿಶೀಲಿಸುತ್ತಿದ್ದಂತೆ ಆತನ ಎದುರೇ ಹಿಂಬದಿ ಸೀಟಿನಲ್ಲಿಟ್ಟಿದ್ದ 25 ಲಕ್ಷ ರೂ. ಇದ್ದ ಬ್ಯಾಗನ್ನು ಹೊತ್ತು ಓಡಿದ್ದಾನೆ. ಕೂಡಲೇ ಹಿಂಬಾಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಅಷ್ಟರಲ್ಲೇ ಕಳ್ಳ ಪರಾರಿಯಾಗಿದ್ದ. ಹಣ ಕಳೆದುಕೊಂಡ ಮಹೇಶ್ ಈ ಬಗ್ಗೆ ಜರಿಕ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.