VIDEO| ಕೀ ಕಳೆದುಕೊಂಡರೆ, ನೀವು ಸ್ಕೂಟಿಯನ್ನು ಹೀಗೂ ಸ್ಟಾರ್ಟ್​​ ಮಾಡಬಹುದು ನೋಡಿ...

viralVideo
Published on

ನವದೆಹಲಿ:  ಪ್ರತಿದಿನ ಲಕ್ಷಾಂತರ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ತಮಾಷೆಯಾಗುತ್ತವೆ. ಆದ್ರೆ ಈಗ ವೈರಲ್​ ಆಗಿರುವ ವಿಡಿಯೋ ನೋಡಿದ್ರೆ ನಿಮಗೂ ಅಚ್ಚರಿ ಆಗುತ್ತದೆ. ವಿಡಿಯೋ ಪ್ರಕಾರ, ನಿಮ್ಮ ಹೋಂಡಾ ಆಕ್ಟಿವಾವನ್ನು ಪ್ರಾರಂಭಿಸಲು ನಿಮ್ಮ ಬಳಿ ಕೀ ಇಲ್ಲದಿದ್ದರೂ ಪರವಾಗಿಲ್ಲ ಎಂದು ಹೇಳುವ ಮೂಲಕ ವ್ಯಕ್ತಿಯೊಬ್ಬರು ತಮ್ಮ ಸೃಜನಶೀಲತೆಯನ್ನು ತೋರಿಸಿದ್ದಾರೆ.

ಸ್ಕೂಟಿಗೆ ಬೀಗ ಇಲ್ಲದಿದ್ದರೂ ಫಿಂಗರ್ ಪ್ರಿಂಟ್ ನಿಂದ ಸ್ಟಾರ್ಟ್ ಮಾಡಬಹುದು.. ತಮ್ಮ ಕ್ರಿಯಾಶೀಲತೆಯಿಂದ ಫಿಂಗರ್ ಪ್ರಿಂಟ್ ಸೆನ್ಸಾರ್ ಅಳವಡಿಸಿದರು. ಆ ಸೆನ್ಸರ್ ಅನ್ನು ಬೆರಳಿನಿಂದ ಮುಟ್ಟಿದರೆ ಸ್ಕೂಟಿಯ ಇಂಜಿನ್ ಆನ್ ಆಗುತ್ತದೆ. ಮತ್ತು ಈ ಟ್ರಿಕ್ ಅನೇಕ ನೆಟಿಜನ್‌ಗಳನ್ನು ಆಕರ್ಷಿಸುತ್ತಿದೆ.

ಈ ವಿಡಿಯೋ ಕೆಲವೇ ಸೆಕೆಂಡುಗಳಲ್ಲಿ ವೈರಲ್ ಆಗಿತ್ತು.ಇದುವರೆಗೆ 33 ಲಕ್ಷಕ್ಕೂ ಹೆಚ್ಚು ನೆಟಿಜನ್‌ಗಳು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಅಲ್ಲದೇ 75 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.  ಆದರೆ ಈ ವಿಡಿಯೋದಲ್ಲಿ  ಫಿಂಗರ್ ಪ್ರಿಂಟ್ ಅಳವಡಿಕೆ ಮಾಡುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net