ಡಿಂಪ್ ತಿಮ್ಮಯ್ಯಗೆ ಸನ್ಮಾನ

Oplus_16908288
ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ನಿವಾಸಿ ಹರಿಣಿ ನಾಣಯ್ಯ ದಂಪತಿ ಪುತ್ರ ಡಿಂಪ್ ತಿಮ್ಮಯ್ಯ ಅವರನ್ನು ಎಂ.ಎ ಮುಸ್ತಫಾ ಸನ್ಮಾನಿಸಿದರು. ಕೆ.ಕೆ.ರಮೇಶ್, ಎಚ್.ಎಸ್.ಗಣೇಶ್ ಇದ್ದರು.
Published on

ಸಿದ್ದಾಪುರ : ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 591 ಅಂಕಗಳನ್ನು ಪಡೆದು ಕೊಡಗು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 9ನೇ ರ‌್ಯಾಂಕ್ ಪಡೆದ ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ನಿವಾಸಿ ಹರಿಣಿ ನಾಣಯ್ಯ ದಂಪತಿಗಳ ಪುತ್ರ ಡಿಂಪ್ ತಿಮ್ಮಯ್ಯ ಅವರನ್ನು ಶುಕ್ರವಾರ ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ. ಮುಸ್ತಫಾ ಸನ್ಮಾನಿಸಿದರು. ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ.ಮುಸ್ತಫಾ ಮಾತನಾಡಿ, ಡಿಂಪ್ ತಿಮ್ಮಯ್ಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ನಮ್ಮೂರಿಗೆ ಹೆಮ್ಮೆಯ ವಿಷಯ. ಅವರ ಮುಂದಿನ ಶಿಕ್ಷಣಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net