ಶತಾಯುಷಿ ಸಿದ್ದಮ್ಮಗೆ ಗೌರವಾರ್ಪಣೆ

1 nrp 1
ಎನ್.ಆರ್.ಪುರ ತಾಲೂಕಿನ ಕರುಗುಂದ ಗ್ರಾಮದ ಶತಾಯುಷಿ ಸಿದ್ಧಮ್ಮ ಅವರನ್ನು ಗ್ರಾಪಂನಿಂದ ಗೌರವಿಸಲಾಯಿತು. ಶೈಲಾ, ವಾಣಿ, ಚಂದ್ರಶೇಖರ್, ರವೀಂದ್ರ, ಡಿ.ಜಿ.ಸತೀಶ್ ಇತರರಿದ್ದರು.
Published on

ಎನ್.ಆರ್.ಪುರ: ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಭಾನುವಾರ ಕರಗುಂದ ಗ್ರಾಮದ ಶತಾಯುಷಿ ಸಿದ್ದಮ್ಮ (102) ಅವರನ್ನು ಕಡಹಿನಬೈಲು ಗ್ರಾಮ ಪಂಚಾಯಿತಿಯಿಂದ ಗೌರವಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ಅ.1ರಂದು ಅಂತಾರಾಷ್ಟ್ರೀಯ ಹಿರಿಯರ ದಿನ ಎಂದು ಘೋಷಿಸಿ, 100 ವರ್ಷ ಪೂರೈಸಿರುವ ಹಿರಿಯ ಮತದಾರರಿಗೆ ಗ್ರಾಪಂನಿಂದ ಗೌರವಿಸಿ ಅಭಿನಂದನಾ ಪತ್ರ ನೀಡಲು ಸರ್ಕಾರ ಆದೇಶಿಸಿದೆ. ಅದರಂತೆ ಇಂದು ಸಿದ್ದಮ್ಮ ಅವರನ್ನು ಗೌರವಿಸಿದ್ದೇವೆ ಎಂದರು.
ಸದಸ್ಯೆ ವಾಣಿ ನರೇಂದ್ರ ಮಾತನಾಡಿ, ಕರುಗುಂದ ಭಾಗದಲ್ಲಿ ಸಿದ್ದಮ್ಮ ಎಲ್ಲರಿಗೂ ಚಿರಪರಿಚಿತರು. ಅವರು ನಿಷ್ಠೆಯಿಂದ ಕೂಲಿ ಕೆಲಸ ಮಾಡಿ ಜೀವನ ನಡೆಸಿ ಎಲ್ಲರ ಪ್ರೀತಿ ಗಳಿಸಿದ್ದಾರೆ. ದೀರ್ಘಾಯುಷ್ಯ ಪಡೆಯಲು ಅವರ ಆಹಾರ ಪದ್ಧತಿ ಕಾರಣ ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ಚಂದ್ರಶೇಖರ್, ರವೀಂದ್ರ, ಪೂರ್ಣಿಮಾ, ಎ.ಬಿ.ಮಂಜುನಾಥ್, ಗ್ರಾಪಂ ಮಾಜಿ ಉಪಾಧ್ಯಕ್ಷ ಡಿ.ಜಿ.ಸತೀಶ್, ಬಿಲ್ ಕಲೆಕ್ಟರ್ ರಾಘವೇಂದ್ರ, ಪುಟ್ಟಸ್ವಾಮಿ, ಸಿದ್ದಮ್ಮನ ಪುತ್ರ ಕೃಷ್ಣಪ್ಪ, ಪಿಡಿ ಪ್ರೇಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net