

ಕೋಲಾರ: ಕೋಲಾರ ನಗರಸಭೆಗೆ ಕ್ರಯ ಆಗಿರುವ ಜಮೀನುಗಳ ಸರ್ವೇ ಕಾರ್ಯವು ಶುಕ್ರವಾರ ಆರಂಭವಾಗಿದ್ದು, ಜಮೀನಿನ ಗಡಿ ಗುರುತಿಸಿ ಜೆಸಿಬಿ ಮೂಲಕ ಒತ್ತುವರಿ ತೆರವುಗೊಳಿಸಿದರು.
ಎಡಿಎಲ್ಆರ್ ಹನುಮಂತಪ್ಪ, ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ, ಉಪಾಧ್ಯೆ ಸಂಗೀತಾ, ಸದಸ್ಯರಾದ ಪ್ರವಿಣ್ ಗೌಡ, ರಾಕೇಶ್ ಸಮ್ಮುಖದಲ್ಲಿ ಸರ್ವೇ ನಡೆಯಿತು.
ನಗರಸಭೆಗೆ ಸೇರಿರುವ ಜಾಗಗಳನ್ನು ಸರಿಯಾಗಿ ಗುರುತು ಮಾಡಬೇಕು, ಒತ್ತುವರಿ ಆಗಿದ್ದರೆ ತೆರವು ಮಾಡಿಸಿ, ಇದು ನಗರಸಭೆಗೆ ಸೇರಿರುವ ಸ್ವತ್ತಾಗಿದ್ದು, ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ ಎಂದು ಲಕಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಸದಸ್ಯ ಪ್ರವಿಣ್ಗೌಡ ತಾಲೂಕಿನ ಖಾದ್ರಿಪುರದ ಸರ್ವೇ ನಂಬರ್ 29ರ ಪೈಕಿ ಜಮೀನು ಸಂಬಂಧ ದೂರು ನೀಡಿದ್ದರು. ಜತೆಗೆ ಮತ್ತಷ್ಟು ಆಸ್ತಿಗಳು ಪತ್ತೆಯಾಗಿದ್ದು, ಸರ್ವೇ ನಂ& 33/2ಎ ಪೈಕಿ 1.30 ಗುಂಟೆ, 34/1 ಪೈಕಿ 2.15 ಗುಂಟೆ, 34/2 ಪೈಕಿ 2.06ಗುಂಟೆ ಜಮೀನುಗಳ ಗಡಿ ಗುರುತು ಮಾಡಿದ್ದಾರೆ.
ಸರ್ವೇ ನಂ 30/2 ಪೈಕಿ ನಂಬರ್ ನಗರಸಭೆಗೆ ಪೋಡಿ ಆಗಿಲ್ಲ ಹಾಗೂ ಸರ್ವೇ 29 ಪೈಕಿ ನಂಬರ್ ಜಮೀನನ್ನು ಏಜಾಜ್ ಪಾಷಾ ಎಂಬುವವರು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿದ್ದು, ಈ ಎರಡೂ ಸರ್ವೇ ನಂಬರ್ಗಳ ಪೈಕಿ ಜಮೀನು ಸರ್ವೇ ಕಾರ್ಯವು ಬಾಕಿ ಉಳಿದಿದೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ಶುರುವಾದ ಸರ್ವೇ ಕಾರ್ಯವು ಮಧ್ಯಾಹ್ನ 3 ಗಂಟೆ ತನಕ ನಡೆಯಿತು. ಒತ್ತುವರಿ ತೆರವು ಸಂದರ್ಭದಲ್ಲಿ ಕೆಲ ಸ್ಥಳಿಯರು ಬಂದು ಅಡ್ಡಿಪಡಿಸಲು ಯತ್ನಿಸಿದರು. ಇದಕ್ಕೆ ಸ್ಥಳದಲ್ಲಿದ್ದ ನಗರಸಭೆಯ ಕಂದಾಯ ಅಧಿಕಾರಿಗಳು ನಿಮ್ಮ ಬಳಿ ದಾಖಲೆಗಳು ಇದ್ದಲ್ಲಿ ಹಾಜರುಪಡಿಸಿ, ಸದರಿ ಜಾಗವು ನಗರಸಭೆ ಸೇರಿದ್ದು ಎಂದು ತಿಳಿಸಿದರು. ಆದರೂ, ಸಹ ಪಟ್ಟು ಬಿಡದ ಸ್ಥಳಿಯರು ಈ ಜಾಗವನ್ನು ಏಜಾಜ್ ಪಾಷಾ ಎಂಬುವವರು ಸುಮಾರು 2 ಲಕ್ಷ ರೂ. ತನಕ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ. ಕೆಲ ವ್ಯಕ್ತಿಗಳು ಸರ್ವೇ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿ, ನೀವು ಸರ್ವೇ ಮಾಡುತ್ತಿರುವ ಜಮೀನು ಸರ್ವೇ 88ರ ಪೈಕಿ, ಇದು ನಮಗೆ ಸೇರಿದ್ದಾಗಿದೆ ಎಂದು ಹೇಳಿದರು.
ಆಗ ನಗರಸಭೆಯ ಸಿಬ್ಬಂದಿ ದಾಖಲೆಗಳನ್ನು ಹಾಗೂ ಸರ್ವೇ ನಡೆಯುತ್ತಿರುವ ಜಾಗವನ್ನು ತಾಳೆ ಮಾಡಿದಾಗ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಮುಜುಗರಕ್ಕೆ ಒಳಗಾದ ಸ್ಥಳಿಯರು ಜಮೀನು ಮಾರಾಟ ಮಾಡಿರುವ ವ್ಯಕ್ತಿ ಏಜಾಜ್ನನ್ನು ಸಂಪರ್ಕಿಸಲು ಯತ್ನಿಸಿದರು, ಆದರೆ ಸಂಪರ್ಕಕ್ಕೆ ಸಿಗದ ಕಾರಣ ಆತಂಕಕ್ಕೆ ಒಳಗಾದರು.
* ಬಡವರಿಗೆ ನಿವೇಶನ ಹಂಚಿಕೆಗೆ ಕ್ರಮ
ನಗರಸಭೆಗೆ ಸೇರಿರುವ ಆಸ್ತಿಗಳನ್ನು ರಕ್ಷಣೆ ಮಾಡಲು ಕ್ರಮವಹಿಸಲಾಗಿದ್ದು, ಹಿಂದೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಆ ಸಂದರ್ಭದಲ್ಲಿ ಸರ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಸರ್ವೇ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು, ಅದರಂತೆ ಕಾರ್ಯವು ಶುರುವಾಗಿದ್ದು, ಜಮೀನುಗಳನ್ನು ರಕ್ಷಣೆ ಮಾಡಿ, ವಸತಿ, ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮವಹಿಸಲಾಗುವುದು ಎಂದು ಅಧ್ಯೆ ಲಕ್ಷಿ$್ಮದೇವಮ್ಮ ತಿಳಿಸಿದರು.
* ಆಸ್ತಿಗಳ ವಿಚಾರದಲ್ಲಿ ಸುಮ್ಮನಿರಲ್ಲ
ನಗರಸಭೆಗೆ ಕ್ರಯ ಆಗಿರುವ ಜಮೀನುಗಳಿಗೆ ದುಡ್ಡು ಕೊಟ್ಟು ಖರೀದಿ ಮಾಡಲಾಗಿದೆ. ಅದನ್ನು ಹಿಂದಿನ ಅಧಿಕಾರಿಗಳು, ಮಂಡಳಿಯವರು ರಕ್ಷಣೆ ಮಾಡಲು ಕ್ರಮವಹಿಸಿಲ್ಲ, ಸಿಬ್ಬಂದಿಯೂ ದಾಖಲೆಗಳನ್ನು ನಿರ್ವಹಣೆ ಮಾಡದೆ ಇರುವುದರಿಂದ ಜಮೀನುಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ ಎಂದು ಸದಸ್ಯ ಪ್ರವಿಣ್ಗೌಡ ಬೇಸರ ವ್ಯಕ್ತಪಡಿಸಿದರು. ಇದೀಗ ಪತ್ತೆಯಾಗಿರುವ ಜಮೀನನ್ನು ಬಡಾವಣೆಯಾಗಿ ನಿರ್ಮಾಣ ಮಾಡಿದರೆ ಸಾವಿರಾರು ಮಂದಿಗೆ ನಿವೇಶನ ಹಂಚಿಕೆ ಮಾಡಬಹುದು, ದಾವೆ ಇರುವ ಜಮೀನುಗಳ ಸಂಬಂಧ ಅಧಿಕಾರಿಗಳು ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿ ನಗರಸಭೆಗೆ ವಾಪಸ್ ಪಡೆಯುವ ಪ್ರಯತ್ನ ಮಾಡಬೇಕು, ನಗರಸಭೆಯ ಆಸ್ತಿಗಳ ವಿಚಾರದಲ್ಲಿ ಅಧಿಕಾರಿಗಳು ಸುಮ್ಮನಾದರೂ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
* ಸಭೆಯಲ್ಲೂ ಬಿಸಿ ಬಿಸಿ ಚರ್ಚೆ
ಕೋಲಾರ ತಾಲೂಕಿನ ಖಾದ್ರಿಪುರ ಸರ್ವೇ ನಂ&29ರ ಪೈಕಿ ಜಮೀನು ನಗರಸಭೆಗೆ ಕ್ರಯ ಆಗಿದ್ದು, ಏಜಾಜ್ ಪಾಷಾ ಎಂಬುವವರು ಗುಂಟೆ ಲೆಕ್ಕದಲ್ಲಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದರ ಮಾಹಿತಿ ಕಲೆ ಹಾಕಿರುವ ಸದಸ್ಯ ಪ್ರವಿಣ್ಗೌಡ, ಮತ್ತಷ್ಟು ಆಸ್ತಿಗಳ ದಾಖಲೆಗಳನ್ನು ಪ್ರದರ್ಶಿಸಿ, ನಗರಸಭೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಆಸ್ತಿಗಳ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಧ್ವನಿ ಎತ್ತಿದ್ದರು. ಇದಕ್ಕೆ ಸದಸ್ಯ ರಾಕೇಶ್ ಧ್ವನಿ ಗೂಡಿಸಿದರು. ಇದಕ್ಕೆ ಸ್ಪಂದಿಸಿದ ಅಧ್ಯೆ ಲಕ್ಷಿ$್ಮದೇವಮ್ಮ, ಆಸ್ತಿಗಳ ರಕ್ಷಣೆಗಾಗಿ ಸದಸ್ಯರು, ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗುವುದು. ಪ್ರತಿ 10 ದಿನಕ್ಕೊಮ್ಮೆ ಸಭೆ ನಡೆಸಿ ರಕ್ಷಣೆ ಮಾಡಲು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
* ವಿಜಯವಾಣಿ ಲಶೃತಿ
"ಖಾಸಗಿ ಸ್ವತ್ತಾಯಿತು ನಗರಸಭೆ ಜಮೀನು' ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ವರದಿ ಪ್ರಟಿಸಲಾಗಿತ್ತು. ವರದಿಗೆ ಎಚ್ಚೆತ್ತ ಅಧಿಕಾರಿಗಳು, ಚುನಾಯಿತ ಆಡಳಿತ ಮಂಡಳಿಯವರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ದೂರುದಾರ ಪ್ರವಿಣ್ಗೌಡ, ತಹಸೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಶಾಸಕರ ಗಮನಕ್ಕೆ ತಂದರು. ಆನಂತರವೂ ಕ್ರಮಕೈಗೊಳ್ಳಲು ಮುಂದಾಗದ ಅಧಿಕಾರಿಗಳ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಒಂಟಿ ಹೋರಾಟಕ್ಕೆ ನಿರ್ಧರಿಸಿದ್ದರು. ಈ ಕುರಿತು ವಿಜಯವಾಣಿಯಲ್ಲಿ ಸರಣಿ ವರದಿ ಪ್ರಕಟಿಸಿ ಅಧಿಕಾರಿ, ಚುನಾಯಿತ ಸದಸ್ಯರನ್ನು ಎಚ್ಚರವಹಿಸುವಂತೆ ಮಾಡಿತು.