

ಬೆಂಗಳೂರು: ಲಾರಿಯಲ್ಲಿ ಗೋ ಮಾಂಸ, ಕೊಂಬು, ಮೂಳೆ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸರಿಗೆ ನಟಿ ಐಂದ್ರಿತಾ ರೈ ಮಂಗವಾರ ಟ್ವೀಟರ್‌ನಲ್ಲಿ ದೂರು ನೀಡಿದ್ದಾರೆ.
ಟ್ರಕ್‌ನಲ್ಲಿ ತುಂಬಿರುವ ಗೋ ತ್ಯಾಜ್ಯದ ವಿಡಿಯೋ ಸಮೇತ ಟ್ವೀಟ್ ಮಾಡಿದ ಐಂದ್ರಿತಾ ರೈ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ. ಇದೆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ಪೊಲೀಸ್ ಆಯುಕ್ತ ಮತ್ತು ಆಗ್ನೇಯ ವಿಭಾಗದ ಡಿಸಿಪಿಗೆ ಸಹ ಟ್ಯಾಗ್ ಮಾಡಿದ್ದಾರೆ. ಗೋ ತ್ಯಾಜ್ಯ ಸಾಗಾಣಿಕೆ ಆಗಿರಲಿಲ್ಲ. ಬಿಬಿಎಂಪಿ ಅನುಮತಿ ಪಡೆದು ಟ್ಯಾನರಿ ರಸ್ತೆಯ ರೆಹಮಾತುಲ್ಲಾ ಎಂಬಾತ ಎಮ್ಮೆ ಕೊಂಬು, ಮೂಳೆಗಳನ್ನು ತಮಿಳುನಾಡಿಗೆ ಸಾಗಿಸುತ್ತಿದ್ದರು ಎಂದು ಬೊಮ್ಮನಹಳ್ಳಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಹೊಸೂರು ರಸ್ತೆಯಲ್ಲಿ ಕಾನೂನುಬಾಹಿರವಾಗಿ ಗೋ ಮಾಂಸ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಶಂಕಿಸಿ ಟ್ರಕ್ ಅನ್ನು ಗೋ ಸಂರಕ್ಷಣಾ ದಳದ ಕಾರ್ಯಕರ್ತರು ತಡೆದಿದ್ದರು. ವಿಷಯ ತಿಳಿದ ಬಿಬಿಎಂಪಿ ಮತ್ತು ಪಶುಸಂಗೋಪಾನೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕೊಂಬು, ಮೂಳೆ ಇರುವುದು ಗೊತ್ತಾಗಿದೆ ಎಂದು ಪಶುಸಂಗೋಪನೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಟಿ ಐಂದ್ರಿತಾ ರೈ, ನೀಡಿದ ದೂರಿನ ಮೇರೆಗೆ ರೆಹಮಾತುಲ್ಲಾ ಎಂಬಾತನ್ನು ವಿಚಾರಣೆ ನಡೆಸಲಾಗಿದೆ.ಟ್ರಕ್‌ನಲ್ಲಿ ಎಮ್ಮೆ ತ್ಯಾಜ್ಯ ಸಾಗಾಣಿಕೆ ಬಗ್ಗೆ ಬಿಬಿಎಂಪಿಯಿಂದ ಪರವಾನಿಗೆ ಪಡೆದಿರುವ ದಾಖಲೆಗಳನ್ನು ಸಲ್ಲಿಸಿದ್ದಾರೆ. ಬಿಬಿಎಂಪಿಯಿಂದಲೇ ತ್ಯಾಜ್ಯ ಖರೀದಿಸಿ ತಮಿಳುನಾಡಿನ ಗೊಬ್ಬರ ತಯಾರಿಕಾ ಘಟಕಕ್ಕೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.