ಸಾರಿಗೆ ನೌಕರರ ಮುಷ್ಕರ ಇಂದಿಗೆ ಅಂತ್ಯ? ಏನೆಂತಾರೆ ಸಾರಿಗೆ ಸಚಿವರು?

bvus
Published on

ಬೆಂಗಳೂರು: ರಾಜ್ಯದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದಿಗೆ ಅಂತ್ಯವಾಗುವ ಲಕ್ಷಣ ಕಾಣಿಸಲಾರಂಭಿಸಿದೆ. ಇಂದು ಎರಡನೇ ಸುತ್ತಿನ ಮಾತುಕತೆ ನಡೆಸಿರುವ ಸಾರಿಗೆ ಸಚಿವ ಲಕ್ಷ್ಮಣ್​​ ಸವದಿ ಅವರು ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಸಾರಿಗೆ ನೌಕರರು ಹತ್ತು ಬೇಡಿಕೆ ಇಟ್ಟಿದ್ದರು. ಅವನ್ನೆಲ್ಲ ಈಡೇರಿಸುವ ಭರವಸೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಂದು ಹೆಜ್ಜೆ ನಾವು ಮುಂದೆ ಹೋಗಿದ್ದೇವೆ. ಅವರು ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ. ಅರ್ಧಗಂಟೆಯಲ್ಲಿ ಎಲ್ಲ ಸಮಸ್ಯೆ ಬಗ್ಗೆ ಚರ್ಚೆ ಆಗಿದೆ. ವಿಧಾನ ಸೌಧದಲ್ಲಿ ಇದನ್ನ ಇವತ್ತು ಮುಗಿಸುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರತಿಭಟನೆ ಮಾಡುವವರ ಮತ್ತು ಜನರ ನಡುವೆ ನಾವು ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಿದ್ದೇವೆ. ಕೋವಿಡ್ ಸಮಯದಲ್ಲೂ ಸಂಬಳ ನೀಡಿದ್ದೇವೆ. ನೌಕರರ ಜತೆ ಸಂಪರ್ಕದಲ್ಲಿ ಇದ್ದುಕೊಂಡು ಮಾತುಕತೆ ನಡೆಸುತ್ತೇವೆ. ಅರ್ಧಗಂಟೆಯಲ್ಲಿ ಅಂತಿಮ ಸುತ್ತಿನ ಮಾತುಕತೆ ನಡೆಸುತ್ತೇವೆ. ಅರ್ಧಗಂಟೆ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಸವದಿ ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net