ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗೆ ತೃತೀಯ ಲಿಂಗಿಗಳು

Transgender
Published on

ನವದೆಹಲಿ: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಲ್ಲಿ (ಸಿಎಪಿಎಫ್) ತೃತೀಯ ಲಿಂಗಿಗಳನ್ನು ನೇಮಿಸಿಕೊಳ್ಳುವ ಐತಿಹಾಸಿಕ ಕ್ರಮಕ್ಕೆ ಕೇಂದ್ರ ಗೃಹ ಸಚಿವಾಲಯ ಚಾಲನೆ ನೀಡಿದ್ದು, ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್​ಸಿ) ಇದಕ್ಕೆ ಅವಕಾಶ ನೀಡಲು ಚಿಂತನೆ ನಡೆಸುತ್ತಿದೆ.

ಕೇಂದ್ರದ ಕ್ರಮದಿಂದಾಗಿ ತೃತೀಯ ಲಿಂಗಿಗಳೂ ಇನ್ನು ಮುಂದೆ ಕೇಂದ್ರೀಯ ಅರೆಸೇನಾ ಪಡೆಗಳಲ್ಲಿ ಮುಂಚೂಣಿ ನಾಯಕತ್ವ ವಹಿಸುವುದಕ್ಕೆ ಅವಕಾಶ ಲಭ್ಯವಾಗಲಿದೆ.

ದೇಶದ ವಿವಿಧ ಭಾಗಗಳಲ್ಲಿ ಆಂತರಿಕ ಭದ್ರತಾ ಕಾರ್ಯಗಳಲ್ಲಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲು ಅನುವಾಗುವಂತೆ ಯುಪಿಎಸ್​ಸಿ ಪರೀಕ್ಷೆಗಳಿಗೆ ಹಾಜರಾಗಲು ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ. ಕೇಂದ್ರ ಸರ್ಕಾರ ಕಳೆದ ವರ್ಷ ಡಿಸೆಂಬರ್​ನಲ್ಲಿ ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣಾ ಕಾನೂನಿನ ಅಧಿಸೂಚನೆ ಹೊರಡಿಸಿರು ವುದರಿಂದ ತೃತೀಯ ಲಿಂಗಿಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಹಾಗೂ ಸೇವೆಗಳಲ್ಲಿ ‘ಸಮಾನ ಅವಕಾಶ ಕಲ್ಪಿಸುವುದು’ ಅಗತ್ಯವಾಗಿದೆ.

ಅಭಿಪ್ರಾಯ ಕೋರಿಕೆ: ತೃತೀಯ ಲಿಂಗಿಗಳ ಸೇರ್ಪಡೆಗೆ ಆಕ್ಷೇಪವಿದೆಯೇ ಇಲ್ಲವೇ ಎನ್ನುವುದನ್ನು ತಿಳಿಸುವಂತೆ ಗೃಹ ಸಚಿವಾಲಯ, ಐದೂ ಅರೆಸೇನೆ ಅಥವಾ ಸಿಎಪಿಎಫ್​ಗಳಿಗೆ ಸೂಚನೆ ನೀಡಿದೆ. ಯುಪಿಎಸ್​ಸಿ ಅರ್ಜಿಗಳಲ್ಲಿ ಪುರುಷ, ಮಹಿಳೆ ಅಂಕಣದ ಜೊತೆ ‘ತೃತೀಯ ಲಿಂಗಿ’ ಅಂಕಣ ನಮೂದಿಸಲಾತ್ತದೆ.

ಮೊದಲ ಪ್ರಕರಣ

2017ರಲ್ಲಿ ತಮಿಳುನಾಡಿನಲ್ಲಿ ಕೆ. ಪ್ರತೀಕಾ ಯಾಶಿನಿ ಎಂಬುವವರು ಪೊಲೀಸ್ ಇಲಾಖೆಗೆ ಸೇರಿದ್ದು ತೃತೀಯ ಲಿಂಗಿಯೋರ್ವರು ಪೊಲೀಸ್ ಪಡೆಗಳಿಗೆ ಸೇರ್ಪಡೆಯಾದ ಮೊತ್ತ ಮೊದಲ ಪ್ರಕರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net