ತೃತೀಯಲಿಂಗಿ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ: ಹತ್ಯೆಗೆ ಕಾರಣವಾಗಿದ್ದಾರೂ ಏನು?

Transgender Murder
Published on

ಬೆಂಗಳೂರು: ನಗರದಲ್ಲಿ ನಡೆದ ತೃತೀಯಲಿಂಗಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

ಅರುಣ್ ಮತ್ತು ಶಿವು ಬಂಧಿತ ಆರೋಪಿಗಳು. ಸುಬ್ರಮಣ್ಯಪುರ ಇನ್ಸ್‌ಪೆಕ್ಟರ್ ಪರಮೇಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಎರಡು ದಿನಗಳ ಹಿಂದೆ ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರಕ್ಕೆ ತೃತೀಯಲಿಂಗಿ ವಿಜಯಾ ಮತ್ತು ಆರೋಪಿಗಳು ಕಿತ್ತಾಡಿಕೊಂಡಿದ್ದರು. ಈ ವೇಳೆ ಕೋಪಗೊಂಡು ವಿಜಯಾ ಕುತ್ತಿಗೆಗೆ ಆರೋಪಿ ಅರುಣ್​ ಹರಿತವಾದ ಆಯುಧದಿಂದ ಇರಿದಿದ್ದ. ಬಳಿಕ ತಾನೇ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದ.

ಈ ವೇಳೆ ಮಾರ್ಗ ಮಧ್ಯೆ ಕುಮಾರಸ್ವಾಮಿ ಲೇಔಟ್ ಬಳಿ ವಿಜಯಾ ಕೊನೆಯುಸಿರೆಳೆದಿದ್ದರಿಂದ ಆಟೋದಲ್ಲೇ ಶವ ಬಿಟ್ಟು ಆರೋಪಿಗಳಿಬ್ಬರು ಪರಾರಿಯಾಗಿದ್ದರು. ಈ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net