ಏಳು ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

police
Published on

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತ ವಿಭಾಗಕ್ಕೆ ಮೇಜರ್ ಸರ್ಜರಿ ಮಾಡಿದ್ದು ಏಳು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹುದ್ದೆ ನಿರೀಕ್ಷೆಯಲ್ಲಿದ್ದ ಶಾಂತನು ಸಿನ್ಹಾ ಅವರನ್ನು ಸಿಐಡಿಯ ಡಿಐಜಿ ಹುದ್ದೆಗೆ ಹಾಗೂ ಸಿಐಡಿಯ ಎಸ್‌ಪಿ ಹುದ್ದೆಗೆ ಜಿ.ಸಂಗೀತ ಅವರನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದವರು:

ಶಾಂತನು ಸಿನ್ಹಾ- ಡಿಐಜಿಪಿ, ಸಿಐಡಿ

ಜಿ.ಸಂಗೀತಾ, ಎಸ್‌ಪಿ, ಸಿಐಡಿ

ಅಬ್ದುಲ್ ಅಹದ್, ನಿರ್ದೇಶಕರು, ಬಿಎಂಟಿಸಿ (ಸೆಕ್ಯೂರಿಟಿ ಆ್ಯಂಡ್ ವಿಜಿನಲ್ಸ್)

ಲಕ್ಷ್ಮಣ್ ನಿಂಬರಗಿ, ಎಸ್ ಪಿ, ವಿಜಯಪುರ

ಚನ್ನಬಸವಣ್ಣ ಲಂಗೋಟಿ, ನಿರ್ದೇಶಕ ಕರ್ನಾಟಕ ಪೊಲೀಸ್ ಅಕಾಡೆಮಿ (ಹೆಚ್ಚುವರಿ ಹೊಣೆ)

ಪೃಥ್ವಿಕ್ ಶಂಕರ್, ಎಸ್‌ಪಿ, ಯಾದಗಿರಿ

ಶಿವಾಂಶು ರಜಪೂತ್, ಎಸ್‌ಪಿ, ರಾಜ್ಯ ಅಪರಾಧ ದಾಖಲೆ ವಿಭಾಗ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net