

ಬೆಂಗಳೂರು: ಇನ್ಸ್ಪೆಕ್ಟರ್ ವರ್ಗಾವಣೆ ತಡೆ ಹಿಡಿದಿರುವ ವಿಚಾರ ಕುರಿತು ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ತಾಂತ್ರಿಕವಾಗಿ 250 ಜನರನ್ನು ವರ್ಗಾವಣೆ ಮಾಡಿದ್ದೆವು. ಬಹುತೇಕ ಎಲ್ಲರೂ ರಿಪೋರ್ಟ್ ಮಾಡಿಕೊಂಡಿದ್ದಾರೆ. ಕೆಲವು ಕಡೆ ಆಗಿಲ್ಲ. ಅದನ್ನ ಸರಿಪಡಿಸಿಕೊಂಡು ಮಾಡುತ್ತೇವೆ ಎಂದು ಪರಮೇಶ್ವರ್ ಅವರು ತಿಳಿಸಿದರು.
ಎಲ್ಲವನ್ನೂ ಕುಮಾರಸ್ವಾಮಿ ಕ್ರಿಟಿಸೈಸ್ ಮಾಡೋದಲ್ಲ. ಪಾಸಿಟಿವ್ ಸಲಹೆ ಕೊಡುವುದಾದರೆ ಕೊಡಲಿ, ಎಲ್ಲದರಲ್ಲೂ ಆರೋಪ ಮಾಡುವುದು ಸರಿಯಲ್ಲ. ಸೋಮವಾರದೊಳಗೆ ಟ್ರಾನ್ಸ್ಫರ್ ಇಶ್ಯೂ ಮಾಡ್ತೀವಿ. ವರ್ಗಾವಣೆ ತಡೆ ಹಿಡಿದಿರೋದು ಕ್ಲಿಯರ್ ಮಾಡುತ್ತೇವೆ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಪೊಲೀಸ್ ಸಭೆಯಲ್ಲಿ ವೈಎಸ್ಟಿ ಭಾಗಿಯಾಗಿದ್ರು ಎಂಬ ಕುಮಾರಸ್ವಾಮಿ ಆರೋಪ ವಿಚಾರದ ಬಗ್ಗೆ ಉತ್ತರಿಸಿದ ಪರಮೇಶ್ವರ್, ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ ಎಂದರು.
ಬಿಜೆಪಿ ಪ್ರತಿಭಟನೆಗೆ ತಿರುಗೇಟು
SCSP TSP ಗೆ ಬಜೆಟ್ನ ಲ್ಲಿ ಹಣ ಇಟ್ಟಿರೋರು ನಾವು. ಅದರ ಅಡಿಯಲ್ಲಿ ಹಣ ಖರ್ಚು ಮಾಡಬೇಕು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಹಣ ಖರ್ಚು ಮಾಡಿದ್ರಾ ಅಂತ ನೋಡಬೇಕು. ಈ ಹಣ ಬಡವರಿಗೆ ಹೋಗ್ತಿದೆ. ಅಕ್ಕಿ, ವಿದ್ಯುತ್, ಮಹಿಳೆಯರಿಗೆ ಕೊಡೋದ್ರಲ್ಲಿ SC, ST ಜನ ಹೆಚ್ಚು ಇದ್ದಾರೆ. ಅಂದ್ರೆ ಬಡವರು ಹೆಚ್ಚಿದ್ದು, ಎಂಪವರ್ ಮಾಡಲು ಈ ಹಣ ಕೊಡ್ತಿದ್ದೇವೆ. ಅದರಲ್ಲಿ ತಪ್ಪೇನು ಇದೆ.? ಅವರು 30 ಸಾವಿರ ಕೊಡುವ ಕಡೆ 25 ಸಾವಿರ ಕೊಟ್ಟರು ಡೀಮ್ಡ್ ಎಕ್ಸ್ಪೆಂಡೀಚರ್ ಅಂತ ಇದೇ ಹಣ ಖರ್ಚು ಮಾಡಿದ್ರು. ಈಗ ನಮ್ಮ ಸರ್ಕಾರ ಬಂದ ಮೇಲೆ ಬಡ ಜನರ ಮೇಲೆ ಎತ್ತುವ ಕೆಲಸ ಮಾಡ್ತಿದ್ದೇವೆ. ಆದ್ರೆ ಅವರು ಸಹಿಸುತ್ತಿಲ್ಲ, ಅವರ ಅಜೆಂಡಾನೇ ಬೇರೆ. ನಾವು ಬಡವರ ಪರ ಕೆಲಸ ಮಾಡ್ತಿದ್ದೇವೆ ಎಂದು ಬಿಜೆಪಿ ಪ್ರತಿಭಟನೆಗೆ ತಿರುಗೇಟು ನೀಡಿದ್ದಾರೆ ಪರಮೇಶ್ವರ್.