ಸರ್ಕಾರಿ ಸಿಬ್ಬಂದಿಗೆ ತರಬೇತಿ ಕಡ್ಡಾಯ | Rules for promotion

Vidhanasoudha
Published on

ಬೆಂಗಳೂರು: ರಾಜ್ಯ ಸರ್ಕಾರದ ಗ್ರೂಪ್ ಎ, ಬಿ ಮತ್ತು ಸಿ ವೃಂದ ನೌಕರರ ಪದನ್ನೋತಿಗೆ ತರಬೇತಿ ಕಡ್ಡಾಯಗೊಳಿಸುವ ನಿಯಮಾವಳಿಗಳ ಕರಡು ಪ್ರಕಟಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಮಂಗಳವಾರ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ, ಸಲಹೆ ಹಾಗೂ ಅಭಿಪ್ರಾಯಗಳನ್ನು ಸಲ್ಲಿಸಲು ನೌಕರರಿಗೆ 15 ದಿನಗಳ ಕಾಲಾವಕಾಶ ನೀಡಿದೆ.

‘ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಂಬಡ್ತಿಗಾಗಿ ತರಬೇತಿ ಕಡ್ಡಾಯ) ನಿಯಮಗಳು, 2025 ಪ್ರಕಾರ ಗ್ರೂಪ್ ಎ, ಬಿ ಮತ್ತು ಸಿ ವೃಂದದ ನೌಕರರ ಬಡ್ತಿಯ ಹಿಂದಿನ ವರ್ಷದಲ್ಲಿ ಕನಿಷ್ಠ 10 ದಿನಗಳ ಖುದ್ದು ತರಬೇತಿ ಕಡ್ಡಾಯವಾಗಿದೆ.

ಗ್ರೂಪ್ ಸಿಯಲ್ಲಿ ಬರುವ ಚಾಲಕರು ಹಾಗೂ ಗ್ರೂಪ್ ಡಿ ನೌಕರರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಕಾರ್ಯಕ್ಷಮತೆ ಸುಧಾರಣೆ, ತಂತ್ರಜ್ಞಾನದ ಕೌಶಲ ಹೆಚ್ಚಳ ಸೇರಿ ಹಲವು ಕಾರಣಗಳಿಗೆ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ.

ಆ್ಲೈನ್ ತರಬೇತಿಯೊಂದಿಗೆ ಪ್ರತಿಯೊಬ್ಬ ನೌಕರ ಅಧಿಸೂಚಿತ ಆನ್‌ಲೈನ್ ಕೋರ್ಸ್‌ಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೂಚಿಸಿದ ಪ್ರಕಾರ ಆನ್‌ಲೈನ್ ಕಲಿಕಾ ವೇದಿಕೆಯನ್ನು ಪ್ರತಿ ವರ್ಷ ಕನಿಷ್ಠ ಸಂಖ್ಯೆಯ ಅಂಕಗಳನ್ನು ಗಳಿಸಬೇಕು.

ನಿಯಮಗಳಂತೆ ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಯು ತರಬೇತಿ ಪಡೆಯಬೇಕಾದ ಸಂಸ್ಥೆಯ ವೇದಿಕೆ ಮೂಲಕ ತರಬೇತಿಗಾಗಿ ಅರ್ಜಿ ಸಲ್ಲಿಸಬೇಕು. ಆ್ಲೈನ್ ತರಬೇತಿಗೆ ಅರ್ಜಿ ಸಲ್ಲಿಸಿದ್ದರೆ ಅವರನ್ನು ಅವರ ವೃಂದ ಜೇಷ್ಠತೆಯ ಕ್ರಮದಲ್ಲಿ ತರಬೇತಿಗೆ ಕಳುಹಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net