ದ್ವಿತೀಯ ಪಿಯುಸಿ ಅಭ್ಯರ್ಥಿಗಳಿಗೆ ತರಬೇತಿ

Exam
Published on

ಮೈಸೂರು: ನಗರದ ಜಿಆರ್‌ಎನ್ ಅಕಾಡೆಮಿ ವತಿಯಿಂದ ದ್ವಿತೀಯ ಪಿಯುಸಿ ಖಾಸಗಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹತ್ತು ತಿಂಗಳ ತರಬೇತಿ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಆರ್.ನಾಗೇಶ್ ತಿಳಿಸಿದರು.
ನಗರ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. ಐಟಿಐ, ಡಿಪ್ಲೊಮಾ, ದ್ವಿತೀಯ ಪಿಯುಸಿ ವಿಜ್ಞಾನ ಸಂಯೋಜನೆಯಲ್ಲಿ ಅನುತ್ತೀರ್ಣರಾಗಿದ್ದು, ವಿವಿಧ ಕಾರಣದಿಂದ ಕಾಲೇಜು ವಿದ್ಯಾಭ್ಯಾಸ ಮೊಟಕುಗೊಳಿಸಿರುವವರಿಗೆ ಇದು ನೆರವಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಹಿತಿಗೆ ಮೊ. 9535161811 ಸಂಪರ್ಕಿಸಲು ಕೋರಿದರು. ಉಪನ್ಯಾಸಕರಾದ ಬಿ.ಎಸ್.ಕೃಷ್ಣಕುಮಾರ್, ಜಿ.ಸಂಗೀತ ಮತ್ತು ಪಿ.ಮಹಾಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net