

ಕೊಯಮತ್ತೂರು: ಕಾರು ಗುದ್ದಿದ ಪರಿಣಾಮ ಬೈಕ್ವೊಂದು 10 ಅಡಿ ಮೇಲಕ್ಕೆ ಹಾರಿ, ಟ್ರಾವೆಲ್ರ ಮೇಲೆ ಬಿದ್ದು ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಬರಲಿವೆ ಕೇವಲ ಎಥೆನಾಲ್ ಬಳಸಿ ಓಡುವ ವಾಹನಗಳು!
ಮೃತನನ್ನು ಪೊಲ್ಲಾಚಿ ಜಿಲ್ಲೆಯ ಅಂಬರಂಪಾಳ್ಯಂನ ಜಾಕೀರ್ ಹುಸೇನ್(36) ಎಂದು ಗುರುತಿಸಲಾಗಿದೆ. ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಆತನ ಮಗ ಅಜ್ಮಲ್ ಪರಿಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಬಡ್ಡಿ ಪಂದ್ಯಾವಳಿಗಾಗಿ ಕೊಯಮತ್ತೂರಿನ ನವಕರೈ ಪ್ರದೇಶದಲ್ಲಿನ ತರಬೇತುದಾರರಿಂದ ಮಾರ್ಗದರ್ಶನ ಪಡೆಯಲು ಮಗನನ್ನು ಕರೆದುಕೊಂಡು ಜಾಕೀರ್ ಹೋಗುತ್ತಿದ್ದರು. ಈ ವೇಳೆ ಚಾವಡಿ ಚೆಕ್ ಪೋಸ್ಟ್ ಬಳಿ ಬಂದಾಗ ಎದುರಿನಿಂದ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿದೆ.
ಪರಿಣಾಮವಾಗಿ ದ್ವಿಚಕ್ರ ವಾಹನ ಮೇಲಕ್ಕೆ ಹಾರಿ ಹಿಂದಿನಿಂದ ಬರುತ್ತಿದ್ದ ಟ್ರಾವೆಲ್ರ ಮೇಲೆ ಬಿದ್ದು ಅದರ ಗಾಜು ಪುಡಿಪುಡಿಯಾಗಿದೆ. ಸುಮಾರು 10 ಅಡಿ ಎತ್ತರದಿಂದ ಜಾಕೀರ್ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬೆತ್ತಲೆ ವಿಡಿಯೋ ಕಾಲ್ ರೆಕಾರ್ಡ್ ಮಾಡಿ, ಶಿಕ್ಷಕಿಗೆ 4 ಲಕ್ಷ ರೂ.ಗೆ ಬೇಡಿಕೆಯಿಟ್ಟ ವಿದ್ಯಾರ್ಥಿ
ಸ್ಥಳದಲ್ಲಿದ್ದ ಸ್ಥಳೀಯರು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬಾಲಕನನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜಾಕಿರ್ನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೆ.ಜಿ.ಚಾವಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರಿನಲ್ಲಿ ಬಂದವರಿಗಾಗಿ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)