video/ ಕುಡಿದು ಫುಟ್​ಪಾತ್​ನಲ್ಲೇ ಮಲಗಿದ ಟ್ರಾಫಿಕ್​ ಪೊಲೀಸ್​

police drunk
Published on

ಹೊಸಕೋಟೆ: ಜನರ ರಕ್ಷಕ ಎನಿಸಿಕೊಂಡ ಪೊಲೀಸ್​ ಪೇದೆಯೊಬ್ಬರು ಸಮವಸ್ತ್ರಧಾರಿಯಾಗಿ ಹಾಡಹಗಲೇ ಕುಡಿದು ಫುಟ್​ಪಾತ್​ನಲ್ಲಿ ಮಲಗಿರುವ ವಿಡಿಯೋ ವೈರಲ್​ ಆಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಚನ್ನಬೈರೇಗೌಡ ಕ್ರೀಡಾಂಗಣ ಬಳಿ ಟ್ರಾಫಿಕ್​ ಪೇದೆಯೊಬ್ಬರು ಕುಡಿದ ಅಮಲಿನಲ್ಲೇ ನಿದ್ರೆಗೆ ಜಾರಿದ್ದಾರೆ. ಮದ್ಯದ ನಶೆಯಲ್ಲಿ ವಾಹನ ಚಾಲನೆ ಮಾಡುವವರಿಗೆ ಬಿಸಿ ಮುಟ್ಟಿಸಬೇಕಿದ್ದವರೇ ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ್ದಕ್ಕೆ ಸಾರ್ವಜನಿಕರಿಂದ ಭಾರೀ ಟೀಕೆಗಳು ವ್ಯಕ್ತವಾಗಿದೆ. ಇದನ್ನೂ ಓದಿರಿ ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್​ ಸೋಂಕು!

ಪಾನಮತ್ತನಾಗಿ ಫುಟ್​ಪಾತ್​ನಲ್ಲಿ ಮಲಗಿದ್ದ ಪೇದೆಯನ್ನು ಸಾರ್ವಜನಿಕರು ಎಷ್ಟೇ ಎಚ್ಚರ ಮಾಡಲು ಹೋದರೂ ಮೈಮೇಲೆ ಪ್ರಜ್ಞೆ ಇಲ್ಲದಂತೆ ಮಲಗಿದ್ದನ್ನು ಸ್ಥಳೀಯರೇ ಮೊಬೈನಲ್ಲಿ ವಿಡಿಯೋ ಮಾಡಿದ್ದು, ಜಾಲತಾಣದಲ್ಲಿ ವೈರಲ್​ ಆಗಿದೆ. ಎದ್ದೇಳಿ, ಮನೆಯಲ್ಲಿ ಹೋಗಿ ಮಲಗಿ ಎಂದು ವ್ಯಕ್ತಿಯೊಬ್ಬರು ಎಬ್ಬಿಸಲು ಯತ್ನಿಸಿದರೂ ಆ ಪೇದೆ, 'ಐದು ನಿಮಿಷ ಮಲಗುತ್ತೇನೆ' ಎಂದಿದ್ದಾರೆ. ಈ ಪೇದೆ ಯಾವ ಠಾಣೆಯವರು, ಎಲ್ಲಿಯವರು ಎಂಬುದು ತಿಳಿದು ಬಂದಿಲ್ಲ.

ಒಟ್ಟಿನಲ್ಲಿ ಜನರಿಗೆ ಕಾನೂನಿನ ಪಾಠ ತಿಳಿಹೇಳಬೇಕಾದ ಆರಕ್ಷಕರೊಬ್ಬರು ಹೀಗೆ ರಸ್ತೆಯಲ್ಲಿ ಕುಡಿದು ಮಲಗಿದ್ದು, ಇಲಾಖೆಗೂ ಇರಿಸುಮುರಿಸು ತರಿಸಿದೆ. ಯಾರಾದರೇನು ಇದು 'ಎಣ್ಣೆ' ಗಮ್ಮತ್ತು ಎಲ್ಲರಿಗೂ ಒಂದೇ ಎಂಬ ಕಾಮೆಂಟ್ಸ್​ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net