More

    ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್​ ಸೋಂಕು!

    ಕಾರವಾರ: ಮದುವೆಯಾದ ಐದೇ ದಿನಕ್ಕೆ 25 ವರ್ಷದ ಯುವಕ ಕರೊನಾಗೆ ಬಲಿಯಾಗಿದ್ದು, ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 100 ಜನರ ಪೈಕಿ 20 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನೂ ಹಲವರ ಪರೀಕ್ಷಾ ವರದಿ ಬರಬೇಕಿದೆ.

    ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದ ಮಂಗಳೂರು ಮೂಲದ ಯುವಕನ ಮದುವೆ ಜೂ.25ರಂದು ಭಟ್ಕಳದಲ್ಲಿ ಇಲ್ಲಿನ ಯುವತಿಯೊಬ್ಬಳ ಜತೆ ನೆರವೇರಿತ್ತು. ಈ ಮದುವೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ವರನಿಗೆ ಕರೊನಾ ಲಕ್ಷಣವಿದ್ದರೂ ನಿರ್ಲಕ್ಷಿಸಿ ಆತನ ಕುಟುಂಬಸ್ಥರು ಮದುವೆ ಮಾಡಿದ್ದು, ಸೋಂಕು ಹರಡಲು ಕಾರಣರಾಗಿದ್ದಾರೆ ಎಂದು ಅವರ ವಿರುದ್ಧ ಕೇಸ್​ ದಾಖಲಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದನ್ನೂ ಓದಿರಿ ಸ್ಮಶಾನದಲ್ಲೇ ಎಸೆದರು ಪಿಪಿಇ ಕಿಟ್​, ಸ್ಥಳೀಯರಲ್ಲಿ ಆತಂಕ

    ವರನ ಕುಟುಂಬಸ್ಥರು ಮಂಗಳೂರಿನಲ್ಲಿದ್ದರು. ಮದುವೆ ಹಿನ್ನೆಲೆ ಜು.22ರಂದು ಭಟ್ಕಳಕ್ಕೆ ಬಂದಿದ್ದ. 25ರಂದು ಮದುವೆ ಮುಗಿಯುತ್ತಿದ್ದಂತೆ ಮಂಗಳೂರಿನಲ್ಲಿರುವ ಮನೆಗೆ ವಧು-ವರ ಹಾಗೂ ಕುಟುಂಬಸ್ಥರು ತೆರಳಿದ್ದರು. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 26ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ. 30ರಂದು ಮೃತಪಟ್ಟಿದ್ದಾನೆ.

    ಈತನ ಸಂಪರ್ಕಕ್ಕೆ ಬಂದ 100ಕ್ಕೂ ಅಧಿಕ ಜನರ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನೂ ಹಲವರ ವರದಿ ಬರಬೇಕಿದೆ. ಸದ್ಯಕ್ಕೆ ವರದಿ ಬಂದವರ ಪೈಕಿ 20 ಜನರಿಗೆ ಕರೊನಾ ಸೋಂಕು ಇರುವುದು ಗೊತ್ತಾಗಿದೆ. ಮದುವೆ ಮನೆಯಲ್ಲಿ ಸಕ್ರಿಯವಾಗಿದ್ದ 4 ಕುಟುಂಬಗಳನ್ನು ಗುರುತಿಸಲಾಗಿದೆ.

    ಇದನ್ನೂ ಓದಿರಿ ಥೂ..‌. ಇವನೆಂಥ ಮಗ? ಬೀದಿಯಲ್ಲೇ ಹೆತ್ತಮ್ಮನ ಹೊಟ್ಟೆಗೆ ಒದ್ದು ವಿಕೃತಿ ಮೆರೆದ

    ಇಂತಹದ್ದೇ ಮತ್ತೊಂದು ಘಟನೆ ಬಿಹಾರದ ಪಟನಾದ ಹಳ್ಳಿಯೊಂದರಲ್ಲಿ ಸಂಭವಿಸಿದ್ದನ್ನು ಸ್ಮರಿಸಬಹುದು. ಗುರುಗಾಂವ್​​ ಮೂಲದ 30 ವರ್ಷದ ಸಾಫ್ಟ್​​ವೇರ್​ ಇಂಜಿನಿಯರ್​ ಮದುವೆಯಾದ ಎರಡೇ ದಿನಕ್ಕೆ ಕರೊನಾಗೆ ಬಲಿಯಾಗಿದ್ದ. ಈತನ ಮದುವೆಯಲ್ಲಿ ಪಾಲ್ಗೊಂಡಿದ್ದ 90ಕ್ಕೂ ಹೆಚ್ಚು ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈತನಿಗೆ ಕರೊನಾ ಲಕ್ಷಣ ಇದ್ದರೂ ಮೃತಪಟ್ಟ ಬಳಿಕವೂ ಕೊವಿಡ್​-19 ಟೆಸ್ಟ್​ಗೆ ಒಳಪಡಿಸದೆ ಅಂತ್ಯಸಂಸ್ಕಾರ ಮಾಡಲಾಗಿತ್ತು.

    ಆ ಮಹಿಳೆಯನ್ನು ಪಲ್ಲಂಗಕ್ಕೆ ಕರೆದಿಲ್ಲ… ಇದೊಂದು ಷಡ್ಯಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts