More

    ಥೂ..‌. ಇವನೆಂಥ ಮಗ? ಬೀದಿಯಲ್ಲೇ ಹೆತ್ತಮ್ಮನ ಹೊಟ್ಟೆಗೆ ಒದ್ದು ವಿಕೃತಿ ಮೆರೆದ

    ಚಾಮರಾಜನಗರ: ಒಂಬತ್ತು ತಿಂಗಳು ಹೊಟ್ಟೆಯಲ್ಲೇ ಹೊತ್ತುಕೊಂಡು ಪ್ರತಿಕ್ಷಣವೂ ತನ್ನ ಮಗುವಿಗಾಗಿ ಮಿಡಿಯುವ ಜೀವ ಎಂದರೆ ಅದುವೇ ತಾಯಿ ಮಾತ್ರ. ಮಕ್ಕಳು ಎಷ್ಟೇ ದೊಡ್ಡವರಾದರೂ ತಾಯಿ ಪಾಲಿಗೆ ಅವರು ಇನ್ನೂ ಪುಟ್ಟಕಂದ. ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲಹುತ್ತಾಳೆ. ಸರ್ವಸ್ವವನ್ನೂ ಧಾರೆ ಎರೆಯುತ್ತಾಳೆ. ಅಂತಹ ತಾಯಿ ಮೇಲೆ ಮಕ್ಕಳಿಂದಲೇ ಹಲ್ಲೆ, ದೌರ್ಜನ್ಯದಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಈ ಸಾಲಿಗೆ ಇಂದು ಕೊಳ್ಳೇಗಾಲ ತಾಲೂಕಿನ ಉಗನೀಯ ಗ್ರಾಮದಲ್ಲಿ ಸಂಭವಿಸಿದ ದುರ್ಘಟನೆಯೂ ಸೇರಿಕೊಂಡಿದೆ.

    ಉಗನೀಯ ಗ್ರಾಮದಲ್ಲಿ ಹಿರಿಯರ ಸಮ್ಮುಖದಲ್ಲೇ ತನ್ನ ತಾಯಿಯ ಹೊಟ್ಟೆಗೆ ಕಾಲಿನಿಂದ ಮಗನೇ ಒದ್ದು ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಅಸ್ವಸ್ಥರಾದ ರಾಜಮ್ಮ ಅವರನ್ನು ಗ್ರಾಮಸ್ಥರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದು ರಾಜಮ್ಮ ನರಳಾಡುವಂತಾಗಿದೆ. ಇದನ್ನೂ ಓದಿರಿ ಆ ಮಹಿಳೆಯನ್ನು ಪಲ್ಲಂಗಕ್ಕೆ ಕರೆದಿಲ್ಲ… ಇದೊಂದು ಷಡ್ಯಂತ್ರ

    ಹಿರಿಯರ ಸಮ್ಮುಖದಲ್ಲಿ ಆಸ್ತಿ ವಿಚಾರವಾಗಿ ಪಂಚಾಯಿತಿ ನಡೆಯುತ್ತಿತ್ತು. ಈ ವೇಳೆ ತಾಯಿ ಮೇಲೆ ಮಗ ದೊರೆಸ್ವಾಮಿ ಹಲ್ಲೆ ಮಾಡಿ ಕಾಲಿಂದ ಹೊಟ್ಟೆಗೆ ಒದ್ದಿದ್ದಾನೆ. ದೊರೆಸ್ವಾಮಿ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸ್ಮಶಾನದಲ್ಲೇ ಎಸೆದರು ಪಿಪಿಇ ಕಿಟ್​, ಸ್ಥಳೀಯರಲ್ಲಿ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts