ಇವರಿಗೆ ತಪ್ಪು ಮಾಡೋದೇ ಚಾಳಿ; ಕೊನೆಗೂ ಸಿಕ್ಕಿಬಿದ್ದು ದಂಡ ಕಟ್ಟಿದರು...

collage
Published on

ಬೆಂಗಳೂರು: ಒಬ್ಬ 23 ಸಲ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಕೊನೆಗೂ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದು, ದಂಡ ಕಟ್ಟಿದ್ದು ಮೊನ್ನೆ ಮೊನ್ನೆಯಷ್ಟೇ ವರದಿ ಆಗಿತ್ತು. ಇದೀಗ ಆತನನ್ನು ಮೀರಿಸುವಂಥ ಮತ್ತಿಬ್ಬರು ಸಿಕ್ಕಿಬಿದ್ದಿದ್ದಾರೆ, ಮಾತ್ರವಲ್ಲ ದಂಡವನ್ನೂ ಕಟ್ಟಿದ್ದಾರೆ.

ಪದೇಪದೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನೇ ಚಾಳಿ ಆಗಿಸಿಕೊಂಡಿದ್ದ ಇಬ್ಬರನ್ನು ಬೆಂಗಳೂರಿನ ಸಂಚಾರ ಪೊಲೀಸರು ಪತ್ತೆ ಹಚ್ಚಿ, ಅಷ್ಟೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾವಿರಾರು ರೂಪಾಯಿ ದಂಡ ವಿಧಿಸಿದ್ದಾರೆ.

ಕೆಂಗೇರಿ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ಎನ್​.ಮಂಜು ಅವರು, ಸುಮಾರು 74 ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದ KA02-JP-0136 ದ್ವಿ-ಚಕ್ರ ವಾಹನದ ಮಾಲೀಕರಿಂದ 14,600 ರೂ. ದಂಡ ವಸೂಲಿ ಮಾಡಿದ್ದಾರೆ.

ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್​ಸ್ಪೆಕ್ಟರ್​ ಮಹದೇವಯ್ಯ ಅವರು, ಸುಮಾರು 34 ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದ ಕೆಎ-01-ಹೆಚ್ ವೈ-6494 ದ್ವಿ-ಚಕ್ರ ವಾಹನದ ಮಾಲೀಕರಿಂದ 17,000 ರೂ. ದಂಡ ವಸೂಲಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net