

ತುಮಕೂರು: ಬ್ಯಾಂಕ್ ಗೇಟ್ ಮುರಿದು ಜಪ್ತಿ ಮಾಡಿದ್ದ ಟ್ರ್ಯಾಕ್ಟರ್ಗಳನ್ನು ರೈತರು ತೆಗೆದುಕೊಂಡು ತೆರಳಿದ ಘಟನೆ ನಗರದಲ್ಲಿ ನಡೆದಿದೆ.
ಸಾಲ ಮರುಪಾತಿಯಾಗದ ಟ್ರ್ಯಾಕ್ಟರ್ಗಳನ್ನು ಪಿಎಲ್ಡಿ ಬ್ಯಾಂಕ್ ಸಿಬ್ಬಂದಿ ಜಪ್ತಿ ಮಾಡಿ ಬ್ಯಾಂಕ್ ಆವರಣದಲ್ಲಿ ನಿಲ್ಲಿಸಿದ್ದರು.
ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಹುಲಿಕಟ್ಟೆ ನೇತೃತ್ವದಲ್ಲಿ ಜಮಾಯಿಸಿದ ರೈತರು ಪಿಎಲ್ಡಿ ಬ್ಯಾಂಕ್ ಗೇಟ್ ಬೀಗ ಮುರಿದು ಟ್ರಾಕ್ಟರ್ಗಳನ್ನು ಚಲಾಯಿಸಿಕೊಂಡು ತೆರಳಿದರು.
ಬ್ಯಾಂಕ್ ಸಿಬ್ಬಂದಿ ನೋಟಿಸ್ ನೀಡದೆ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ ಎಂದು ರೈತರು ವಿರೋಧಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ರಂಗನಾಥ್ ಸೇರಿದಂತೆ ನಾಲ್ವರು ರೈತರ ಟ್ರ್ಯಾಕ್ಟರ್ಗಳನ್ನು ಜಪ್ತಿ ಮಾಡಲಾಗಿತ್ತು. (ದಿಗ್ವಿಜಯ ನ್ಯೂಸ್)