

ಬಳ್ಳಾರಿ: ಹೂವಿನಹಡಗಲಿ ತಾಲೂಕಿನ ಹೊಳಲು ಪಟ್ಟಣದ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಭೀಕರ ಅಪಘಾತ ನಡೆದಿದ್ದು ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.
ಬೀರಬ್ಬಿ ಗ್ರಾಮದ ಮದುವೆಗೆಂದು ಸುಮಾರು 50ಕ್ಕೂ ಹೆಚ್ಚು ಮಂದಿ ಟ್ರ್ಯಾಕ್ಟರ್ನಲ್ಲಿ ದಾಸರಳ್ಳಿಗೆ ಬರುತ್ತಿದ್ದರು. ಇವರೆಲ್ಲರೂ ದಾಸರಳ್ಳಿ ನಿವಾಸಿಗಳು. ಬೀರಬ್ಬಿ ಗ್ರಾಮದಿಂದ ಮೂರು ಕಿ.ಮೀ.ದೂರ ಸಾಗಿದ ಬಳಿಕ ಹೊಳಲು ಸಮೀಪ ಏಕಾಏಕಿ ಟ್ರ್ಯಾಕ್ಟರ್ನ ಟೈಯರ್ನಲ್ಲಿ ಸಮಸ್ಯೆಯಾಗಿ ಪಲ್ಟಿಯಾಗಿದೆ.
ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 10ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)