ಅನ್‌ಲಾಕ್‌ನ ಮೊದಲ ದಿನವೇ ಮದ್ಯ ತಂದು ಸಿಕ್ಕಿಬಿದ್ದ ಪ್ರವಾಸಿಗರು!

1132203
Published on

ಚಿಕ್ಕಮಗಳೂರು: ಇಷ್ಟು ದಿನ ಮನೆಯಲ್ಲೇ ಕುಳಿತು ಬೋರಾದವರಿಗೆ ಅನ್‌ಲಾಕ್‌ನಿಂದ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಕೆಲವರು ಕಚೇರಿ-ದೇವಸ್ಥಾನಗಳಿಗೆ, ಇನ್ನು ಕೆಲವರು ಪ್ರವಾಸಿ ತಾಣಗಳಿಗೆ ಹೋಗಲು ಆರಂಭಿಸಿದ್ದಾರೆ.

ಅದೇ ರೀತಿ, ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನಗಿರಿಗೆ ಅನ್‌ಲಾಕ್‌ನ ಮೊದಲ ದಿನವಾದ ಸೋಮವಾರವೇ ಸಾಕಷ್ಟು ಪ್ರವಾಸಿಗರ ದಂಡು ಹರಿದುಬಂತು. ಅವರಲ್ಲಿ ಕೆಲವರು ಮದ್ಯದ ಬಾಟಲ್‌ಗಳನ್ನು ತಂದು ಫಜೀತಿ ಅನುಭವಿಸಿದರು. ಚಿಕ್ಕಮಗಳೂರು ತಾಲೂಕಿನ ಕೈಮರಾ ಚೆಕ್‌ಪೋಸ್ಟ್‌ನಲ್ಲಿ ಪ್ರವಾಸಿಗರ ಬ್ಯಾಗ್‌ಗಳನ್ನು ತಪಾಸಣೆಗೆ ಒಳಪಡಿಸಿದ ಸಿಬ್ಬಂದಿಗೆ ಅಚ್ಚರಿ ಕಾದಿತ್ತು. ಹಲವಾರು ಪ್ರವಾಸಿಗರು ಬೆಟ್ಟದಲ್ಲಿ ಕುಳಿತು ಪ್ರಕೃತಿ ಸೌಂದರ್ಯದ ಜತೆಗೆ ಸವಿಯಲು ಮದ್ಯದ ಬಾಟಲಿಗಳನ್ನೂ ತಂದಿದ್ದರು! ಅವುಗಳನ್ನೆಲ್ಲ ಗೇಟ್‌ನಲ್ಲಿಯೇ ಸಿಬ್ಬಂದಿ ಸೀಜ್ ಮಾಡಿ ಲಾಕರ್‌ನಲ್ಲಿ ಇರಿಸಿದ್ದು, ಪ್ರವಾಸಿಗರು ಸಂಜೆ ವಾಪಸ್ ಬಂದ ಬಳಿಕ ಅವರಿಗೇ ಹಿಂತಿರುಗಿಸುವ ನಿಯಮ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net