"ನನ್ನನ್ನು ಮುಟ್ಟಿದರೆ ನಿನ್ನನ್ನು 35 ತುಂಡುಗಳಾಗಿ ಕತ್ತರಿಸುತ್ತೇನೆ": ಮೊದಲ ರಾತ್ರಿಯಂದು ಪತಿಗೆ ಬೆದರಿಕೆ ಹಾಕಿದ ಪತ್ನಿ..Bride threatens groom on wedding night

Prayagraj Naini
Published on

Bride threatens groom on wedding night :  ಮದುವೆಯಾದ ಮೊದಲ ದಿನವೇ ಪತಿಗೆ ಚಾಕುವಿನಿಂದ ಬೆದರಿಕೆ ಹಾಕಿದ ಯುವತಿಯೊಬ್ಬಳು, ಕೆಲವೇ ದಿನಗಳಲ್ಲಿ ತನ್ನ ಗೆಳೆಯನೊಂದಿಗೆ ಓಡಿಹೋದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಪ್ರದೇಶದಲ್ಲಿ ನಡೆದಿದೆ. ಪತಿ ನಿಶಾದ್ ಪೊಲೀಸರಿಗೆ ನೀಡಿರುವ ವಿವರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ನಿಶಾದ್ ಎಂಬ ಯುವಕ ಪೊಲೀಸ್​ ಠಾಣೆಯಲ್ಲಿ ಮಾತನಾಡಿ, ನಾನು ಏಪ್ರಿಲ್ 29, 2025 ರಂದು ಸಿತಾರಾ ಎಂಬ ಯುವತಿಯನ್ನು ವಿವಾಹವಾದೆ. ಮೊದಲ ರಾತ್ರಿಯಂದು ಕೈಯಲ್ಲಿ ಚಾಕು ಹಿಡಿದು ರೂಮ್​ಗೆ  ಬಂದಳು. ನೀನು ನನ್ನನ್ನು ಮುಟ್ಟಿದರೆ, ನಿನ್ನನ್ನು 35 ತುಂಡುಗಳಾಗಿ ಕತ್ತರಿಸುತ್ತೇನೆ ಎಂದು ಬೆದರಿಕೆ ಹಾಕಿದಳು. ಅದೇ ದಿನ, ಸಿತಾರಾ  ಅಮನ್ ಅವರನ್ನು ಪ್ರೀತಿಸುತ್ತಿರುವುದಾಗಿ  ಹೇಳಿದಳು.

ಕೇದಾರನಾಥ ಯಾತ್ರೆಗೆ ತನ್ನನ್ನು ಕರೆದುಕೊಂಡು ಹೋಗುವಂತೆ ಸಿತಾರಾ ಕೇಳಿಕೊಂಡಿದ್ದಳು. ಆದರೆ ಇತ್ತೀಚೆಗೆ ನಡೆದ ರಾಜ ರಘುವಂಶಿ ಹತ್ಯೆ ಬಗ್ಗೆ ತಿಳಿದಿದ್ದ ನಾನು ಹೋಗಲು ಸಾಧ್ಯವಿಲ್ಲ ಎಂದು ಹೇಳಿದೆ, ಕೊಲ್ಲಲು ಪಿತೂರಿ ಇದೆ ಎಂಬ ಅನುಮಾನದಿಂದ ತಾನು ಎಚ್ಚರಿಕೆಯಿಂದ ವರ್ತಿಸಿದೆ. ಮದುವೆಯ ನಂತರ, ಸಿತಾರಾ  ನಮ್ಮ ಮನೆಯಲ್ಲಿ ಮೂರು ದಿನಗಳ ಕಾಲ ಇದ್ದರು, ಆದರೆ ಒಂದು ದಿನ ಮಧ್ಯರಾತ್ರಿ, ಅವಳು ಗೋಡೆ ಹಾರಿ  ರಾತ್ರಿ ತನ್ನ ಪ್ರಿಯಕರ ಅಮನ್ ಜೊತೆ ಓಡಿಹೋದಳು.  ನನ್ನ  ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ನಿಶಾದ್ ಹೇಳಿದ್ದಾರೆ.

ನನ್ನ ಜೀವನದಲ್ಲಿ ಇದು ಮರೆಯಲಾಗದ ಅನುಭವ. ನಾನು ಅವಳ ಜತೆ ಇದ್ದ ಮೂರು ದಿನಗಳ ಕಾಲ, ನನ್ನನ್ನು ಯಾವಾಗ ಕೊಲ್ಲುತ್ತಾಳೆ ಎಂಬ ಭಯದಿಂದ ನನಗೆ ನಿದ್ರೆ ಬರಲಿಲ್ಲ. ಈಗ, 'ಮದುವೆ' ಎಂಬ ಪದವನ್ನು ಕೇಳಿದರೆ ನನ್ನ ಹೃದಯ ಬಡಿತ ವೇಗಗೊಳ್ಳುತ್ತದೆ ಎಂದು ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಜೋಡಿಯನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net