

ಕೋಲಾರ: ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ, ಮುಂದಿನ ಪ್ರಜೆಗಳನ್ನು ಸೃಷ್ಟಿಸುವ ಶಾಲೆ ಆವರಣವು ಪುಂಡರ ತಾಣವಾಗಿ ಮಾರ್ಪಾಡಾಗಿದ್ದು, ತಾಲೂಕಿನ ತೊಟ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಎಸ್ಡಿಎಂಸಿ ತಂಡ
ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದೆ.
ಸಂಜೆಯಾದರೆ ಯುವಕರ ಗುಂಪುಗಳು ಜೂಜಾಡುವುದು, ಮಧ್ಯ ಸೇವನೆ ಮಾಡಲು ಜಾಗ ಮಾಡಿಕೊಂಡಿದ್ದಾರೆ. ಬಿಯರ್ ಬಾಟಲಿ, ಮದ್ಯದ ಪೊಟ್ಟಣಗಳು, ತಿಂಡಿ ಪೊಟ್ಟಣ, ಸಿಗರೇಟ್ ತುಂಡುಗಳನ್ನು ಕಿಟಕಿಯಿಂದ ತರಗತಿ ಒಳಗೆ ಹಾಗೂ ಶಾಲಾ ಆವರಣದಲ್ಲೆಲ್ಲ ಎಸೆದು ಹೋಗುತ್ತಾರೆ. ರಜೆಯ ದಿನಗಳಂತೂ ಇದಕ್ಕೆ ಮಿತಿಯೇ ಇರುವುದಿಲ್ಲ. ಶಾಲೆಗೆ ಬರುವ ವಿದ್ಯಾರ್ಥಿಗಳು, ಶಿಕ್ಷಕರು ಅವುಗಳನ್ನು ತೆಗೆದು ಹಾಕಿ ಸ್ವಚ್ಛಗೊಳಿಸಬೇಕಾಗಿದೆ.
ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು, ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಸುತ್ತಲಿನ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆ ಸೇರಿ ಎಲ್ಲರ ಗಮನಕ್ಕೂ ತಂದಿದ್ದಾರೆ. ಆಗ ಸ್ವಲ್ಪ ದಿನ ಸರಿ ಹೋಗುತ್ತದೆ ಹೊರತು ಮತ್ತೆ ಅದೇ ಚಾಳಿ ಮುಂದುವರೆಯುತ್ತದೆ.
ಗ್ರಾಮಸ್ಥ ಟಿ.ವಿ.ರಮೇಶ್ ನೇತೃತ್ವದಲ್ಲಿ ಮುಖ್ಯಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿಯವರು, ಗ್ರಾಮಸ್ಥರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕಾಂತರಾಜ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಕ್ಕೆ ಬೀಟ್ ಪೊಲೀಸ್ ವ್ಯವಸ್ಥೆ ಮಾಡುವುದರ ಜತೆಗೆ, ಜೂಜಾಡುವ, ಮಧ್ಯ ಸೇವನೆ ಮಾಡಲು ಬರುವವರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
* ಹಲವು ವರ್ಷದಿಂದ ಇದೇ ಸಮಸ್ಯೆ
ಕೆಲ ಪುಂಡರು ಶಾಲೆಯ ಆವರಣದಲ್ಲಿ ಮಧ್ಯ ಸೇವನೆ ಮಾಡಿ ಬಾಟಲಿಗಳನ್ನು ಹೊಡೆದು ಹಾಕಿರುತ್ತಾರೆ. ಗಾಜಿನ ಚೂರುಗಳು ಮಕ್ಕಳಿಗೆ ಕಾಲಿಗೆ ತಗುಲಿ ಗಾಯಗಳಾಗಿವೆ. ಊಟ ಮಾಡುವ ಸ್ಥಳದಲ್ಲೇ ಗುಟ್ಖಾ, ಎಲೆ ಅಡಿಕೆ ಉಗಿದು ಗಲೀಜು ಮಾಡಿದ್ದಾರೆ. ಅಡುಗೆ ಮಾಡುವವರಿಂದ ಸ್ವಚ್ಛಗೊಳಿಸಬೇಕಿದೆ. ತುಂಬಾ ದಿನಗಳಿಂದ ಈ ಸಮಸ್ಯೆ ಇದೆ ಎಂದು ಶಾಲೆಯ ಮುಖ್ಯಶಿಕ್ಷಕಿ ಜಯಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಟ್...
ಗ್ರಾಮ ಪಂಚಾಯಿತಿ ಕಚೇರಿ ಎದುರಿಗೆ ಇರುವ ಸರ್ಕಾರಿ ಶಾಲೆಯ ಆವರಣದಲ್ಲಿ ಕುಡುಕರ ಹಾವಳಿ ಜಾಸ್ತಿಯಿದೆ. ಈ ವಿಚಾರ ಗೊತ್ತಿದ್ದರೂ ಶಿಕ್ಷಣ ಇಲಾಖೆಗಳು ಅಧಿಕಾರಿಗಳು ಸುಮ್ಮನಿದ್ದಾರೆ. ವ್ಯಾಪ್ತಿಯ ಠಾಣೆ ಪೊಲೀಸರು ಭೇಟಿ ವ್ಯವಸ್ಥೆ ಸರಿಪಡಿಸಬೇಕು.
> ಟಿ.ವಿ.ರಮೇಶ್, ತೊಟ್ಲಿ ಗ್ರಾಮಸ್ಥ
ಕೋಟ್...
ತೊಟ್ಲಿ ಶಾಲೆಯ ವಿಚಾರವು ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಶಾಲಾ ಆವರಣದೊಳಗೆ ಕಿಡಿಗೇಡಿಗಳ ಪ್ರವೇಶ ತಡೆಯಲು ಕ್ರಮ ವಹಿಸಲಾಗುವುದು.
> ಉಮಾ, ಬಿಇಒ, ಕೋಲಾರ