ಮಾದಪ್ಪನ ಸನ್ನಿಧಿಯಲ್ಲಿ ಹುಂಡಿ ಎಣಿಕೆ ಮುಕ್ತಾಯ: 36 ದಿನಗಳಲ್ಲಿ 2.5 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹ

hundi enike
Published on

ಚಾಮರಾಜನಗರ: ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಸುಮಾರು 2.5 ಕೋಟಿ ರೂಪಾಯಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.

ನ.3ರ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಎರಡೂವರೆ ಕೋಟಿಗೂ ಅಧಿಕ ನಗದು, 122 ಗ್ರಾಂ ಚಿನ್ನ ಮತ್ತು 2.71 ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ. ಇದು ಕಳೆದ 36 ದಿನಗಳ ಅವಧಿಯಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಯ ಸಂಗ್ರಹವಾಗಿದೆ. ಇದರಲ್ಲಿ ಭಕ್ತರು 14 ಲಕ್ಷ ರೂಪಾಯಿಗೂ ಹೆಚ್ಚು ಕಾಣಿಕೆಯನ್ನು ನಾಣ್ಯದ ರೂಪದಲ್ಲೇ ಸಲ್ಲಿಸಿದ್ದಾರೆ. ಸಿಸಿ ಕ್ಯಾಮರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್​ನಲ್ಲಿ ಎಣಿಕೆ ಕಾರ್ಯ ನಡೆದಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net