ರಾಜ್ಯ ಬಿಜೆಪಿಗೆ ಇಬ್ಬರು ಉಪಾಧ್ಯಕ್ಷರ ನೇಮಕ; ಇನ್ಯಾರು, ಏನೇನು? ಇಲ್ಲಿದೆ ವಿವರ..

BJP
Published on

ಬೆಂಗಳೂರು: ಭಾರತೀಯ ಜನತಾ ಪಕ್ಷದ ರಾಜ್ಯ ಘಟಕವು ಉಪಾಧ್ಯಕ್ಷರ ಸ್ಥಾನಕ್ಕೆ ಇಬ್ಬರನ್ನು ನೇಮಕ ಮಾಡಿದ್ದು, ಇನ್ನೊಬ್ಬರು ವಕ್ತಾರರನ್ನೂ ನೇಮಿಸಿದೆ. ರಾಜ್ಯ ಮಾತ್ರವಲ್ಲದೆ ಜಿಲ್ಲಾವಾರು ಹಲವಾರು ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಪೂರ್ತಿ ವಿವರ ಇಲ್ಲಿದೆ.

ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹಾಗೂ ಉಡುಪಿಯ ನಯನಾ ಗಣೇಶ್ ಅವರನ್ನು ಉಪಾಧ್ಯಕ್ಷರನ್ನಾಗಿ ಮತ್ತು ಮೈಸೂರಿನ ಎಂ.ಜಿ. ಮಹೇಶ್ ಅವರನ್ನು ರಾಜ್ಯ ಮುಖ್ಯ ವಕ್ತಾರರನ್ನಾಗಿ ಮಾಡಲಾಗಿದೆ. ಮಂಗಳೂರಿನ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಅನಿವಾಸಿ ಭಾರತೀಯ ವಿಭಾಗದ ರಾಜ್ಯ ಸಂಚಾಲಕರನ್ನಾಗಿ ನೇಮಿಸಲಾಗಿದೆ.

ಸಂಪೂರ್ಣ ಪಟ್ಟಿ ಇಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net