ಧಾರಾಕಾರ ಮಳೆ, ಮನೆ ಗೋಡೆ ಕುಸಿತ: ಮಲಗಿದ್ದಲ್ಲೇ ದಂಪತಿ ಸೇರಿ ಒಂದೇ ಕುಟುಂಬದ ಮೂವರು ದುರಂತ ಅಂತ್ಯ

rain wall
Published on

ರಾಯಚೂರು: ಧಾರಾಕಾರ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡ ಘಟನೆ ಮಾನ್ವಿ ತಾಲೂಕಿನ ಕುರಡಿ ಗ್ರಾಮದಲ್ಲಿ ಸೋಮವಾರ ಬೆಳಗಿನಜಾವ ಸಂಭವಿಸಿದೆ.

ಕುರಡಿ ಗ್ರಾಮದ ಪರಮೇಶ(45) ಮತ್ತು ಇವರ ಪತ್ನಿ ಜಯಮ್ಮ(39) ಹಾಗೂ ಪರಮೇಶನ ತಮ್ಮನ ಮಗ ಭರತ್(5) ಮೃತ ದುರ್ದೈವಿಗಳು.

ರಾಯಚೂರು ಜಿಲ್ಲೆಯಾದ್ಯಂತ ಒಂದು ವಾರದಿಂದ ಮಳೆಯಾಗುತ್ತಿದೆ. ನಿರಂತರ ಮಳೆಗೆ ಪರಮೇಶ ಅವರ ಮನೆಯ ಗೋಡೆ ಕುಸಿದಿದೆ. ಇದ್ಯಾವುದರ ಪರಿವೆ ಇಲ್ಲದೆ ನಿದ್ರೆಮಾಡುತ್ತಿದ್ದ ದಂಪತಿ ಸ್ಥಳದಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಇನ್ನು ಗಂಭೀರ ಗಾಯಗೊಂಡಿದ್ದ ಪುಟ್ಟ ಮಗು ಭರತ್​ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net