ಹೆರಿಗೆ ವೇಳೆ ಮೃತಪಟ್ಟ ಅಮೆರಿಕದ ಅಥ್ಲೀಟ್​​​ ಟೋರಿ ಬೋವಿ

Tori Bowie
Published on

ಅಮೆರಿಕಾ: ಟೋರಿ ಬೋವಿ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕದ ಪಡೆದ ಓಟಗಾರ್ತಿ ಹೆರಿಗೆ ವೇಳೆ ಉಂಟಾಗುವ ತೊಂದರೆಗಳಿಂದಾಗಿ ಮೃತಪಟ್ಟಿದ್ದಾರೆ.

ಟೋರಿ ಬೋವಿ 32 ನೇ ವಯಸ್ಸಿನಲ್ಲಿ ನಿಧನರಾದರು. ಹಲವು ದಿನಗಳಿಂದ ಕಾಣದ ಹಿನ್ನೆಲೆಯಲ್ಲಿ ಸ್ಥಳೀಯ ಜಿಲ್ಲಾಧಿಕಾರಿಗಳ ಕಛೇರಿಯ ನಿಯೋಗಿಗಳ ತಪಾಸಣೆಯ ವೇಳೆ ಮೇ 2 ರಂದು ಆಕೆ ಮೃತಪಟ್ಟಿರುವುದು ಪತ್ತೆಯಾಗಿದೆ.

ಕಳೆದ ತಿಂಗಳು ಫ್ಲಾರಿಡಾದ ಆರೆಂಜ್​​ ಕೌಂಟಿಯ ಮನೆಯಲ್ಲಿ ಬೋವಿ ಅವರು ಮೃತಪಟ್ಟಿರುವುದು ಕಂಡುಬಂದಿತ್ತು. ಬೋವಿ 8 ತಿಂಗಳ ಗರ್ಭಿಣಿ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಹೆರಿಗೆ ವೇಳೆ ಅಸುನೀಗಿದ್ದಾರೆ. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಅಸ್ವಸ್ಥತೆಯಾದ ಉಸಿರಾಟದ ತೊಂದರೆ ಮತ್ತು ಎಕ್ಲಾಂಪ್ಸಿಯಾದಿಂದ ಸಂಭವನೀಯ ತೊಡಕು ಉಂಟಾಗಿದೆ ಎಂದು ಆರೆಂಜ್​​​ ಕೌಂಟಿ ವೈದ್ಯರು ತಿಳಿಸಿದ್ದಾರೆ.

ಬೋವೀ ಒಮ್ಮೆ ವಿಶ್ವದ ಅತ್ಯಂತ ವೇಗದ ಮಹಿಳೆಯಾಗಿದ್ದು, ವೃತ್ತಿಜೀವನದಲ್ಲಿ, ಬೋವಿ ಅವರು 2016ರಲ್ಲಿ ರಿಯೊ ಒಲಿಂಪಿಕ್ಸ್​​​ನಲ್ಲಿ 4X100 ಮೀ. ರಿಲೇ ಓಟದಲ್ಲಿ ಕೊನೆಯವರಾಗಿ ಓಡಿ ಅಮೆರಿಕ ತಂಡ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಲಿಂಪಿಕ್ಸ್​​ನಲ್ಲಿ ಅವರು 100 ಮೀ. ಓಟದಲ್ಲಿ ರಜತ ಹಾಗೂ 100 ಮೀ ಓಟದಲ್ಲಿ ಕಂಚಿನ ಪದಕಗಳನ್ನು ಗೆದ್ದು ಕೊಂಡಿದ್ದರು.

ಲಂಡನ್​ನಲ್ಲಿ ನಡೆದ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ 100 ಮೀ. ಓಟದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು. 2011ರಲ್ಲಿ ಕಾರ್ಮೆಲಿಟಾ ಜೆಟೆರ್​​​ ಅವರ ನಂತರ ಒಲಿಂಪಿಕ್ಸ್​​​ ಅಥವಾ ವಿಶ್ವ ಚಾಂಪಿಯನ್​ಶಿಪ್​ 100 ಮೀ ಓಟದಲ್ಲಿ ವಿಜೇತರಾದ ಏಕೈಕ ಅಮೆರಿಕನ್​​ ಓಟಗಾರ್ತಿ ಎನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net