ಮೆಟ್ಟಿಲಿನಿಂದ ಜಾರಿ ಬಿದ್ದು ಖ್ಯಾತ ನಟಿ ಸಾವು; ಅಂಗಾಂಗ ದಾನ ಮಾಡಿದ ಕುಟುಂಬ

park soo ryun
Published on

ನವದೆಹಲಿ: ಕೊರಿಯನ್ ನಟಿ ಪಾರ್ಕ್ ಸೂ ಯನ್​​ ಮೆಟ್ಟಿಲುಗಳಿಂದ ಜಾರಿ ಬಿದ್ದು 29 ನೇ ವಯಸ್ಸಿನಲ್ಲಿ ನಿಧನರಾದರು. ನಟಿ ಕುಟುಂಬಸ್ಥರು ಆಕೆಯ ಅಂಗಾಂಗಗಳನ್ನು ದಾನ ಮಾಡಿದ್ದಾರೆ.

ಮೆಟ್ಟಿಲುಗಳಿಂದ ಆಯಾ ತಪ್ಪಿ ಬಿದ್ದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಬ್ರೇನ್ ಡೆಡ್ ಆದ ಕಾರಣದಿಂದಾಗಿ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ. ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸುತ್ತಿದ್ದಂತೆಯೇ ಆಕೆಯ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

1994ರಲ್ಲಿ ಪಾರ್ಕ್ ಜನಿಸಿದ್ದು. ಈಗ ಅವರಿಗೆ ಕೇವಲ 29 ವರ್ಷ ಮಾತ್ರ. ಈ ಚಿಕ್ಕ ವಯಸ್ಸಿನಲ್ಲಿಯೇ ನಟಿ ಕೊರಿಯನ್ ಸಿನಿಮಾಗಳಲ್ಲಿ ಹೆಸರುಗಳಿಸಿದ್ದರು. ದಿ ಸೆಲ್ಲರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಪಾರ್ಕ್. ಸೋಮವಾರ ಆಕೆ ಅಂತಿಮ ಸಂಸ್ಕಾರ ನಡೆದಿದ್ದು,  ಇಂದು ನಟಿ ಗೌರವಾರ್ಥ ಮೆರವಣಿಗೆ ಕೂಡ ನಡೆದಿದೆ.

ಈ ಕುರಿತು ಮಾತನಾಡಿರುವ ನಟಿಯ ತಾಯಿ, ‘ನನ್ನ ಮಗಳ ಹೃದಯ ಬಡಿತ ಇನ್ನೂ ಹಾಗೆಯೇ ಇದೆ. ಬ್ರೈನ್ ಡೆಡ್ ಆಗಿದೆ. ಆಕೆಯ ಅಂಗಾಂಗಗಳು ದಾನ ಮಾಡುತ್ತೇವೆ. ಈ ಮೂಲಕ ನನ್ನ ಮಗಳು ಕೂಡ ಜೀವಂತವಾಗಿ ಇರುತ್ತಾಳೆ ಎನ್ನುವ ಸಮಾಧಾನ ನಮಗೂ ಇರಲಿದೆ’ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net