ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್​ರನ್ನು ಹೊಗಳಿದ್ದಕ್ಕೆ ವ್ಯಕ್ತಿ ಹತ್ಯೆ

up murder
Published on

ಲಖನೌ: ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ಹೊಗಳಿದ ಎಂಬ ಕಾರಣಕ್ಕೆ ವಾಹನ ಚಾಲಕ ಆತನನ್ನು ಹತ್ಯೆ ಮಾಡಿರುವ ಘಟನೆ ಯುಪಿಯ ಮಿರ್ಜಾಪುರ್​ ಜಿಲ್ಲೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ರಾಜೇಶ್​ ಧಾರ್​ ದುಬೆ ಎಂದು ಗುರುತಿಸಲಾಗಿದ್ದು, ಮಿರ್ಜಾಪುರ್​ ಜಿಲ್ಲೆಯ ಚನ್ಬೆಯ ನಿವಾಸಿ ಅಮ್ಜದ್​ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಹಿನ್ನಲೆ?

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಒಬ್ಬರು ರಾಜೇಶ್​ ಮದುವೆ ಸಮಾರಂಭ ಒಂದನ್ನು ಮುಗಿಸಿಕೊಂಡು ಜೀಪ್​ನಲ್ಲಿ ವಾಪಸ್ ಆಗುವ ವೇಳೆ ಸಹ ಪ್ರಯಾಣಿಕರ ಜೊತೆ ರಾಜಕೀಯದ ವಿಚಾರವಾಗಿ ಚರ್ಚೆ ಶುರು ಆಗಿದೆ. ಈ ವೇಳೆ ರಾಜೇಶ್​ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್​ರನ್ನು ಹೊಗಳಿ ಮಾತನಾಡಿದ್ದಾರೆ.

Car Accident
ಸಾಂದರ್ಭಿಕ ಚಿತ್ರ

ರಾಜೇಶ್​ ಹೊಗಳಿ ಮಾತನಾಡುತ್ತಿದ್ದುದ್ದನ್ನು ಕಂಡು ಸಿಟ್ಟಾದ ವಾಹನ ಚಾಲಕ ಅಮ್ಜದ್ ಆಕ್ಷೇಪ ವ್ಯಕ್ತಪಡಿಸಿದ್ದು,​ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇದರಿಂದ ಕುಪಿತಗೊಂಡ ರಾಜೇಶ್​ ಈ ಇಬ್ಬರು ನಾಯಕರ ಬಗ್ಗೆ ಎತೇಚ್ಚವಾಗಿ ಹೊಗಳಿ ಮಾತನಾಡಲು ಶುರು ಮಾಡಿದ್ದಾನೆ.

ಜೀಪ್ ಹತ್ತಿಸಿ ಹತ್ಯೆ

ಇದರಿಂದ ತೀವ್ರವಾಗಿ ಕೋಪಗೊಂಡ ಅಮ್ಜದ್​ ರಾಜೇಶ್​ನನ್ನು ಜೀಪ್​ನಿಂದ ತಳ್ಳಿದ್ದಾನೆ. ವಾಹನದ ಸೈಡ್​ ಮಿರರ್​ ಹಿಡಿದು ಒಳಗೆ ಬರಲು ಪ್ರಯತ್ನಿಸಲು ಮುಂದಾದಾಗ ಚಾಲಕ ವೇಗವಾಗಿ ಚಾಲನೆ ಮಾಡಿದ ಪರಿಣಾಮ ಜೀಪಿನಡಿ ಸಿಲುಕಿ ರಾಜೇಶ್​ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಹತ್ಯೆಯ ವಿಚಾರ ಕ್ಷಣಾರ್ಧದಲ್ಲೇ ಪ್ರದೇಶದ ಸುತ್ತ ಮುತ್ತ ಹಬ್ಬಿದ ಕಾರಣ ಸಾರ್ವಜನಿಕರು ಪ್ರಯಾಗ್​ರಾಜ್​-ಮಿರ್ಜಾಪುರ್​ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ಅಮ್ಜದ್​ನನ್ನು ಆತನ ಸ್ವಗ್ರಾಮದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಬೆನ್ನಲ್ಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net