51 ಟ್ರ್ಯಾಕ್ಟರ್​ಗಳಲ್ಲಿ ಮದುವೆ ದಿಬ್ಬಣ ಬಂದ ವರ

Wedding Procession
Published on

ಜೈಪುರ: ಮದುವೆ ಒಂದು ವಿಶಿಷ್ಟವಾದ ಬಂಧ. ಎರಡು ಕುಟುಂಬಗಳನ್ನು ಸೇರಿಸುವ ಕಾರ್ಯಕ್ರಮ ಎಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ವಿವಾಹ ಮಹೋತ್ಸವಗಳು ಸಾಕಷ್ಟು ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗುತ್ತಿರುವುದು ವಿಶೇಷ.

ಇದೀಗ ರಾಜಸ್ಥಾನದ ಬರ್ಮೆರ್​ ಜಿಲ್ಲೆಯಲ್ಲಿ ನಡೆದ ಮದುವೆ ಮೆರವಣಿಗೆ ಎಲ್ಲರ ಗಮನ ಸೆಳೆದಿರುವುದು ವಿಶೇಷವಾಗಿದೆ. 51 ಟ್ರ್ಯಾಕ್ಟರ್​ಗಳಲ್ಲಿ ವರನ ಕಡೆಯವರು ವಧುವಿನ ಮನೆಯವರೆಗೂ ಮದುವೆ ದಿಬ್ಬಣದ ಮೆರವಣಿಗೆ ನಡೆಸಿದ್ದಾರೆ.

ಬರ್ಮೆರ್​ ಜಿಲ್ಲೆಯ ಗುಡಮಳನಿ ಗ್ರಾಮದ ಪ್ರಕಾಶ್ ಚೌಧರಿ​ ಎಂಬುವವರು ರೊಲಿ ಗ್ರಾಮದ ಮಮತಾ ಎಂಬುವವರನ್ನು ಸೋಮವಾರ ಮದುವೆಯಾಗಿದ್ದಾರೆ. ವರನ ಮನೆಯಿಂದ ವಧುವಿನ ಮನೆ ಸುಮಾರು 51 ಕಿ.ಮೀ ದೂರವಿದ್ದು, ಪ್ರಕಾಶ್​​ ಕಡೆಯವರು ಮದುವೆ ದಿಬ್ಬಣವನ್ನು ವಿಶಿಷ್ಟವಾಗಿ ಆಯೋಜಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವರನ ತಂದೆ ಜೇತುರಾಮ್​ ನನ್ನ ಮದುವೆಯ ಮೆರವಣಿಗೆಗೆಂದು ಒಂದು ಟ್ರ್ಯಾಕ್ಟರ್​ ಬಳಸಲಾಗಿತ್ತು. ಮಗನ ಮದುವೆ ದಿಬ್ಬಣದ ಮೆರವಣಿಗೆ ಹೆಚ್ಚು ವಿಶಿಷ್ಟವಾಗಿರಲೆಂದು 51 ಟ್ರ್ಯಾಕ್ಟರ್​ಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ನನ್ನ ಕುಟುಂಬದ ಪ್ರಮುಖ ವರತ್ತಿ ಕೃಷಿಯಾಗಿದ್ದು, ಇದರಲ್ಲಿ ಮನೆಯ ಪ್ರತಿಯೊಬ್ಬ ಸದಸ್ಯ ತೊಡಗಿಸಿಕೊಂಡಿದ್ದಾರೆ. ಟ್ರ್ಯಾಕ್ಟರ್​ ರೈತನ ಗುರುತಾಗಿದ್ದು, ನನ್ನ ಅಪ್ಪನ ಮದುವೆಯ ಮೆರವಣಿಗೆ ಒಂದು ಟ್ರ್ಯಾಕ್ಟರ್ಅನ್ನು​ ಬಳಸಲಾಗಿತ್ತು. ನನ್ನ ಮದುವೆಗೇಕೆ 51 ಟ್ರ್ಯಾಕ್ಟರ್​ ಬಳಸಬಾರದೆಂದು ಎಂದು ಯೋಚಿಸಿದೆವು.

ನನ್ನ ತಂದೆ ಹಾಗೂ ತಾತನ ಮದುವೆ ಸಮಾರಂಭಗಳಲ್ಲಿ ಒಂಟೆಗಳನ್ನು ಮೆರವಣಿಗೆಗೆ ಬಳಸಲಾಗಿತ್ತು. ನಮ್ಮ ಕುಟುಂಬದಲ್ಲಿ 20-30 ಟ್ರ್ಯಾಕಟರ್​ಗಳಿದ್ದು, ನನ್ನ ಸ್ನೇಹಿತರದ್ದು ಸೇರಿಸಿ ಒಟ್ಟು 51 ವಾಹನಗಳಲ್ಲಿ ಮೆರವಣಿಗೆ ಮಾಡಿದ್ದೇವೆ. ಟ್ರ್ಯಾಕ್ಟರ್​ಅನ್ನು ಕೃಷಿಗೆ ಮಾತ್ರ ಬಳಸಲಾಗುತ್ತದೆ. ಆದರೆ, ಮದುವೆಗೆ ಯಾಕೆ ಉಪಯೋಗಿಸಬಾರದೆಂದು ಚಿಂತಿಸಿದೆವು ಎಂದು ವರ ಪ್ರಕಾಶ್​ ಚೌಧರಿ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net