

ತಮಿಳುನಾಡು: ಈ ಬಾರಿಯ ದಸರಾ ಹಬ್ಬದ ಸಮಯಕ್ಕೆ ಸಿನಿಪ್ರೇಕ್ಷಕರ ಮುಂದೆ ಹಾಜರಾಗಲು ಸಜ್ಜಾಗಿರುವ ಟಾಪ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆಗೊಳ್ಳುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಪೈಪೋಟಿ ನೀಡಲು ಎದುರು ನೋಡುತ್ತಿವೆ.
ಬಾಲಯ್ಯ ಎಂದೇ ಖ್ಯಾತರಾಗಿರುವ ನಂದಮೂರಿ ಬಾಲಕೃಷ್ಣ ಅಭಿನಯದ 'ಭಗವಂತ ಕೇಸರಿ' ಮತ್ತು ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾಗಳು ಒಂದೇ ದಿನದಂದು ಭರ್ಜರಿ ಬಿಡುಗಡೆಗೆ ಕಾಯುತ್ತಿದ್ದು, ಸಿನಿಪ್ರೇಕ್ಷಕರಿಗೆ ಇಬ್ಬರೂ ಕೂಡ ನೆಚ್ಚಿನ ಕಲಾವಿದರಾದ ಕಾರಣ ಯಾರ ಚಿತ್ರಕ್ಕೆ ಬೆಂಬಲ ಕೊಡಬೇಕು? ಎಂಬುದು ಇದೀಗ ತೀವ್ರ ಗೊಂದಲವನ್ನು ಹುಟ್ಟುಹಾಕಿದೆ ಎಂದೇ ಹೇಳಬಹುದು.
ಬಾಲಯ್ಯ ನಟನೆಯ ಭಗವಂತ ಕೇಸರಿ ಚಿತ್ರ ಕೇವಲ ತೆಲುಗು ಭಾಷೆಯಲ್ಲಿ ಬಿಡುಗಡೆಗೊಂಡರೆ, ಅತ್ತ ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರಹೊಮ್ಮಲಿದೆ. ಎರಡು ಸಿನಿಮಾಗಳೂ ಅಕ್ಟೋಬರ್ 19 ರಂದು ಬಿಡುಗಡೆಯಾಗಲು ಸಜ್ಜಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಾರ ಸಿನಿಮಾ ಯಾವ ರೀತಿ ಕಮಾಲ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್).